ಇದುವರೆಗೆ 205 ಮುಂಡಿಗೆಗಳನ್ನು ಬರೆದಿರುವ ರತ್ನಾ ಮೂರ್ತಿಯವರ 5 ನೇ ಮುಂಡಿಗೆ ಸಂಕಲನ ಇದು . ಹರಿದಾಸ ಸಾಹಿತ್ಯದಲ್ಲಿ ಕೀರ್ತನೆಗಳಲ್ಲದೇ ಸುಳಾದಿ ಉಗಾಭೋಗ ಮುಂಡಿಗೆ ಎಂಬ ರಚನೆಗಳ ಬಗ್ಗೆ ನಾವು ಕೇಳಿರುತ್ತೇವೆ . ಕನಕದಾಸರ * ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ * ಎಂಬುದು ಉಗಾಭೋಗವಂತೆ . ಇವು ಸ್ವಲ್ಪ ಗೂಢಾರ್ಥವನ್ನು ಹೊಂದಿದ್ದು ಹೆಚ್ಚಿನ ವಿವರಣೆ ಯನ್ನು ಬಯಸುತ್ತದೆ. ಸಾಮಾನ್ಯವಾಗಿ ವಚನ ಸಾಹಿತ್ಯವನ್ನು ೧೨ ನೇ ಶತಮಾನಕ್ಕೂ ಹರಿದಾಸ ಸಾಹಿತ್ಯವನ್ನು ೧೫ ನೇ ಶತಮಾನಕ್ಕೂ ಸೀಮಿತಗೊಳಿಸುವುದುಂಟು . ಆದರೆ ಪ್ರತಿಯೊಂದು ಶತಮಾನದಲ್ಲಿ ಯೂ ವಚನಗಳು ಮತ್ತು ಕೀರ್ತನೆಗಳು ರಚಿತವಾಗಿರುವುದು , ಈಗಲೂ ರಚಿತವಾಗುತ್ತಿರುವುದು ಮತ್ತು ಮಹಿಳೆಯರೂ ಈ ಎರಡೂ ಪ್ರಕಾರಗಳಲ್ಲಿ ರಚಿಸಿರುವುದು ಇತ್ತೀಚೆಗೆ ಮೇಲ್ನೆಲೆಗೆ ಬಂದು ಚರ್ಚಿತವಾಗುತ್ತಿರುವ ಸಂಗತಿಯಾಗಿದೆ . ಈ ಹಿನ್ನೆಲೆಯಲ್ಲಿ ರತ್ನಾ ಮೂರ್ತಿ ಯವರ ಈ ರಚನೆಗಳು ಶ್ಲಾಘನೀಯ ಎಂದೂ ದೈವದತ್ತ ಪ್ರತಿಭೆ ಎಂದೂ ಮುನ್ನುಡಿ ಬರೆದಿರುವ ಕಬ್ಬಿನಾಲೆ ವಸಂತ ಭಾರದ್ವಾಜ ಕೊಂಡಾಡಿದ್ದಾರೆ . ಈ ಬಾರಿಯ ಪದ್ಮ ಭೂಷಣ ಪ್ರಶಸ್ತಿ ಪಡೆದ ವೇದ ವೇದಾಂಗ ಪಾರಂಗತ ಕೌಶಿಕ್ ಅವರು ಆಶೀರ್ವಚನ ಬರೆದಿದ್ದಾರೆ . ಇಲ್ಲಿ ೫೦ ಮುಂಡಿಗೆ ಗಳಿವೆ . ಅಗಾಧ ವಾದ ವ್ಯಾಸಂಗ ಮತ್ತು ಪುರಾಣ ಪ್ರಜ್ಞೆ ಇವರಿಗಿದೆ . * ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯಾ * ಎಂಬ ಸಾಲನ್ನು ನೆನಪಿಸುವ * ಕೀಲಿ ಕೈಯನು ತಾರೆ ಕೀಲಿ ಕೈಯ * ಎಂಬ ಸಾಲು ಅರ್ಥ ಪೂರ್ಣ ವಾಗಿದೆ . ತಾನೇ ಹಾಕಿದ ಬೀಗಕ್ಕೆ ತಾನೇ ಕೀಲಿ ಕೈ ಯನ್ನು ಕೊಡುತ್ತಾರೆ ಈಕೆ .
ನಿವೃತ್ತ ಶಿಕ್ಷಕಿಯಾದ ರತ್ನಾ ಮೂರ್ತಿ (ಎಸ್. ಎಂ. ನಾಗರತ್ನ) ಅವರು ಬಿ.ಎಸ್ಸಿ., ಬಿ.ಎಡ್., ಎಂ.ಎ. ಪದವೀಧರೆ. 1949ರ ಸೆಪ್ಟೆಂಬರ್ 15ರಂದು ಜನಿಸಿದರು. ತಂದೆ ಎಸ್.ಎನ್. ಮಂಜುನಾಥ್ ಮತ್ತು ತಾಯಿ ಮಹಾಲಕ್ಷ್ಮಿ. ಕನಸು ನನಸುಗಳ ನಡುವೆ, ಮೇಘಲೀಲೆ, ಚೈತ್ರದ ಚಿಗುರು, ವಿಶ್ವಾರ್ಚನೆ, ನೆತ್ತರಿನ ನಂಟಿರದೆ, ವಾಸ್ತವ, ಗಡಿಯನೊದ್ದು(ಕಥಾ ಸಂಕಲನ), ವಿಕಲಚೇತನ, ನೆಲೆ ತಪ್ಪಿದಾಗ (ಕಾದಂಬರಿಗಳು), ಒಂದು ತೋಟದ ಕಥೆ (7 ನಾಟಕಗಳ ಸಂಕಲನ) ಮುಳುಗಿ ತೇಲಾಡಿದನು (ಸ್ವಂತ ರಚನೆಯ ಚೆನ್ನಕೇಶವಾಂಕಿತ 216 ಕೀರ್ತನೆಗಳು), ಹೇಗೆ ನಿಮ್ಮನೊಲಿಸಲಿ (ಸ್ವಂತ ರಚನೆಯ ಚೆನ್ನಕೇಶವಾಂಕಿತ 365 ಕೀರ್ತನೆಗಳು), 24 ಮುಂಡಿಗೆಗಳು (ದಾಸ ಸಾಹಿತ್ಯದ ...
READ MORE