ಖಾಲಿ ಜೋಳಿಗೆಯ ಕನವರಿಕೆಗಳು

Author : ವಾಣಿ ಭಂಡಾರಿ

Pages 113

₹ 120.00




Year of Publication: 2024
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ,3ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು-572102
Phone: 8073007475, 99866 92342

Synopsys

"ಖಾಲಿ ಜೋಳಿಗೆಯ ಕನವರಿಕೆಗಳು" ಕೃತಿಯು ವಾಣಿ ಭಂಡಾರಿ ಅವರ ಕವನ ಸಂಕಲನವಾಗಿದೆ. ಒಂದು ಹಂತದಲ್ಲಿ ಪ್ರೀತಿಯೇ ಜಗತ್ತು ಎಂದ ಕವಯತ್ರಿ ಅದರ ವೈರುದ್ಯಗಳನ್ನು ಇನ್ನೊಂದು ಮುಖದಲ್ಲಿ ಕಾಣುತ್ತಾರೆ. ಇಲ್ಲಿ ಕಾಣುವ ಬಹುಪಾಲು ಮಹಿಳೆಯರು ಹೆಚ್ಚಾಗಿ ಬಡತನದ ಬೇಗೆ ಅಥವಾ ತಳಸ್ತರದ ನೋವು, ಸಮಾಜದ ಟೀಕೆ ಟಿಪ್ಪಣಿಗಳಿಗೆ ನರಳಿ ನೊಂದ ಭಾವ, ಹಸನಾದ ಪ್ರೀತಿಗೆ ಹೆಸರಿಡಲಾಗದೆ ನೈತಿಕತೆಯ ನೆಲೆಯ ತಳಮಳ, ಅನ್ಯಾಯ, ಸಂಪ್ರದಾಯದ ಶೋಷಣೆಗೆ ಮೈಯೊಡ್ಡಿ ನಿಂತ ಕರಾಳತೆಯ ಹಿಂಸೆ, ನಂಬಿಕೆಯ ಕೊಲೆಗೆ ಪ್ರೀತಿ ಎಂಬ ಎರಡಕ್ಷರದ ಹಿಂದೆ ನಡೆಯುವ ಆಗೋಚರ ಭಾವಾಂತರಂಗದ ತಲ್ಲಣ, ಹಾಗೂ ಮನುಷ್ಯ ಪ್ರೀತಿಯನ್ನೆ ಕಳೆದು ಕೇವಲ ದಾಸ್ಯದ ನೆರಳಿನಲ್ಲಿ ನೋವುಣ್ಣುವ ಚೋಮನ ಪದದಿಂದ ಬೆಳ್ಳಿಯ ದಿಟ್ಟತೆಯವರೆಗೂ ಹಬ್ಬಿ, ಎಲ್ಲರೊಳಗೆ ನಿಲೆ ನಿಂತ ಅವ್ವ ಈ ನೆಲದ ಒಂದು ಶಕ್ತಿಯಾಗಿ ರೂಪಕವಾಗಿ ಮತ್ತೆ ಕಾಡುತ್ತಾಳೆ, ಜತನಗೈಯ್ದು ಕಾಯುವ ಧೀಶಕ್ತಿ ಎಲ್ಲರೊಳಗೆ ಅವ್ವ ಮತ್ತೆ ಮತ್ತೆ ಹೆಣ್ಣಿನಂತರಂಗ ಒಳಹೊಕ್ಕು ಹೊರಹೊಮ್ಮುತ್ತಾಳೆ. ಗಂಡು ರಾಜಕಾರಣದ ಹಿನ್ನೆಲೆಯಲ್ಲಿ ಪ್ರಭುತ್ವವು ತನ್ನ ಕಪಿಮುಷ್ಟಿಯಲಿ ಕಾರುಣ್ಯದ ಬೆಳಕು ನೀಡದೆ ಸ್ತ್ರೀಯರನ್ನು ಬಲಿಪಶುವಾಗಿಸುವ ಅನಾದಿ ಕಾಲದ ಶೋಷಣೆಯ ದನಿಯಾಗಿ ಕವಯಿತ್ರಿ ವೃಷ್ಟಿ ನೆಲೆಯಿಂದ ಸಮಷ್ಟಿಯ ದನಿಯಾಗಿ ಪ್ರತಿನಿಧಿಸುತ್ತಾರೆ. ಇಂತಹ ಕವಿತೆಗಳು ಯಾಕೆ ಸೃಷ್ಟಿಯಾದವು ಎಂಬ ಸಹಜ ಚಿಂತನೆಗೆ ನಾನು ಮೊದಲೆ ತಿಳಿಸಿದಂತೆ, ಕವಿ ಸಮಯದ ಚಮತ್ಕಾರ ಮತ್ತು ಜೀವಸೆಲೆಗೆ ಚೈತನ್ಯವನ್ನು ನೀಡುವುದೇ ಈ ದೈವಿಕ ಪ್ರೀತಿಯಾದ್ದರಿಂದ ಅದೊಂದು ಅನನ್ಯ ಆತ್ಮ ಸಾಂಗತ್ಯದ ಸ್ಪೂರ್ತಿ ಚೇತ‌ನವೇ ಈ ಕವಿತೆಗಳು.

About the Author

ವಾಣಿ ಭಂಡಾರಿ
(24 July 1982)

ವಾಣಿ ಭಂಡಾರಿ ಅವರು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಪದವೀಧರರು. ವೃತ್ತಿಯಿಂದ ಉಪನ್ಯಾಸಕರು. ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ, ಭಾವಗೀತೆ, ಕವನ,ಕಥೆ,  ನ್ಯಾನೋಕಥೆ, ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ, ಶಾಯರಿ, ಗಜಲ್ ಆಧುನಿಕ ವಚನಗಳು, ತುಣುಕುಗಳು ಬರೆಯುವ ಹವ್ಯಾಸ. ನಾಡಿನ ಹಲವಾರು ಪತ್ರಿಕೆಯಲ್ಲಿ ವಿಮರ್ಶಾ ಅಂಕಣ, ಸತ್ಯವಾಣಿ ಕಟೋಕ್ತಿ, ವ್ಯಕ್ತಿತ್ವ ವಿಕಸನ ಅಂಕಣಗಳು ಪ್ರಕಟಗೊಂಡಿವೆ.  ಕೃತಿಗಳು : ಅಂತರ್ ದೃಷ್ಟಿ- ವಿಮರ್ಶಾ ಸಂಕಲನ, ತುಂಗೆ ತಪ್ಪಲಿನ ತಂಬೆಲರು ಭಾಗ:1+2 (ಸಂಶೋಧಾನ್ಮತಕ‌ ಕೃತಿ), ಸಂತನೊಳಗಿನ ಧ್ಯಾನ ...

READ MORE

Related Books