ಎಸ್. ಮಹಾಂತಪ್ಪ ಮೇಟಿಗೌಡ ಅವರ ಕವನ ಸಂಕಲನ- ಕೆಂಡದೋಕುಳಿ. ಇಲ್ಲಿಯ ಕವನಗಳು ಭಾವಗೀತೆಯ ಸ್ವರೂಪದವು. ಆದರೆ, ಕವಿ ತಾನು ಕವಿಯಲ್ಲ ಎಂದು ’ಕವಿತೆಗಳ ಬರೆಯಲು ಕರ್ತೃತ್ವ ಕಲೆಯಿಲ್ಲ ಕವನಗಳ ಗೀಚಲು ನವರಸ ಗಂಧವೆನಗಿಲ್ಲ ಕತೆಗಳ ಕಲ್ಪನೆಗೆ ಮನದಾಳ ಹಿರಿದಿಲ್ಲ ವ್ಯಾಕರಣ ಛಂದಸ್ಸು ಜ್ಞಾನದ ಅರಿವಿಲ್ಲ ನಾನೇನು ಬರೆಯಲಿ, ಕವಿ ನಾನು ಮೊದಲೇ ಅಲ್ಲ’ ಎನ್ನುತ್ತಾರೆ.
ಕವಿ ಮಹಾಂತಪ್ಪ ಮೇಟಿಗೌಡ ಅವರು ರಾಯಚೂರಿನ ಅಮರಾವತಿಯಲ್ಲಿ 1962 ಜನವರಿ 05 ರಂದು ಜನಿಸಿದರು. ಶಿಕ್ಷಣ ಪ್ರೇಮಿಯಾಗಿ ಶಾಲೆಯ ಒಡನಾಟದಲ್ಲಿ ಅನೇಕ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಾರೆ. ಆಕಾಶವಾಣೆಯಲ್ಲಿ ತರಬೇತಿ ಪಡೆದು ಅನೇಕ ರೂಪಕ ನಾಟಕಗಳಲ್ಲಿ ಅಭಿನಯಿಸಿದ ಅನುಭವ. ‘ಕೆಂಡದೋಕುಳಿ’ ಅವರ ಕವನ ಸಂಕಲನ.ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಸೇವಾರತ್ನ ಪ್ರಶಸ್ತಿ, ’ಅನುಭವ ಕವಿ ಶ್ರೀ ಮಧುರ ಚೆನ್ನರ ರಾಜ್ಯ ಪ್ರಶಸ್ತಿ ಲಭಿಸಿವೆ. ...
READ MORE