ಕವಿ ಲಿಂಗಾರೆಡ್ಡಿ ಸೇರಿ ಅವರ ಕವನ ಸಂಕಲನ-ಕೆಂಪು ಚಿತ್ತಾರ. ಈ ಕೃತಿಯು 1987 ರಲ್ಲಿ ಮೊದಲ ಮುದ್ರಣ ಕಂಡಿತ್ತು. ಒಟ್ಟು30 ಕವನಗಳಿವೆ. ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಮುನ್ನುಡಿ ಬರೆದು ‘ 'ಕಮಲಮ್ಮ', 'ಕರಿಯನ ಕಥೆ', 'ಬೀದಿಗೆ ಎಸೆದ ಬಳ್ಳಿಗಳು' ಮುಂತಾದ ಕವನಗಳು ಉತ್ತಮ ನಿರೂಪಣೆ (ನೆರೇಟಿವ್) ತಂತ್ರವನ್ನು ಹೊಂದಿವೆ ಎಂದು ಅಭಿಪ್ಉರಾಯಪಟ್ಪಟರೆ ಸಾಹಿತಿ ಸತೀಶ ಕುಲಕರ್ಣಿ ಅವರು ಬೆನ್ಯನುಡಿ ಬರೆದು ‘ಅಸಮಾನತೆಯನ್ನು ಧಿಕ್ಕರಿಸುತ್ತ ಸಮಾನತೆಯನ್ನು ಪ್ರೀತಿಸುವ ಈ ಕಾವ್ಯಸ್ಪಂದನಕ್ಕೆ ಸೃಜನಶೀಲತೆಯ ಸ್ಪರ್ಶವಿದೆ" ಎಂದು ಪ್ರಶಂಸಿಸಿದ್ದಾರೆ.
ಲೇಖಕ ಲಿಂಗಾರೆಡ್ಡಿ ಸೇರಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು. ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...
READ MORE