ಮಹಿಳೆಯರೇ ಬರೆದ ಅಪಾರ ಪದ್ಯಗಳನ್ನು ಈ ಕೃತಿಯಲ್ಲಿ ಒಂದೆಡೆ ಸಂಪಾದಕಿ ಡಾ. ಎಚ್. ಎಸ್. ಅನುಪಮಾ ಹಿಡಿದಿಟ್ಟಿದ್ದಾರೆ. ಕನ್ನಡದಲ್ಲಿ ಮಹಿಳಾ ಕಾವ್ಯಕ್ಕೆ ಪ್ರಾಚೀನ ಇತಿಹಾಸದ ಬೆಂಬಲ ತೀರಾ ಕಡಿಮೆ. ಅದು ಉಜ್ವಲವಾಗಿ ಹೊರಹೊಮ್ಮಿದ್ದು ಅಕ್ಕಮಹಾದೇವಿಯಂತಹ ಶರಣೆಯಿಂದ. ಅಂತೆಯೇ ಮುಂದೆ ಸಂಚಿಯ ಹೊನ್ನಮ್ಮನಂತಹ ಕವಯಿತ್ರಿಯರು ಹುಟ್ಟಿದರೂ ಅವರ ಕಾವ್ಯಕ್ಕೆ ಹದಿಬದೆಯ ಮಿತಿಗಳಿದ್ದವು. ಆದರೆ ಮಹಿಳೆಯ ಧ್ವನಿ ಮಾತ್ರ ಗುಪ್ತಗಾಮಿನಿಯಂತ ಕತೆಗಳಲ್ಲಿ, ಹಾಡುಗಳಲ್ಲಿ, ಜನಪದ ಕಾವ್ಯಗಳಲ್ಲಿ ಗುಟ್ಟಾಗಿ ಹರಿಯುತ್ತಲೇ ಇತ್ತು. ಭೂಮಿಯೊಳಗಿನ ಲಾವರಸದಂತೆ ಗುಟ್ಟಾಗಿ ಕುದಿಯುತ್ತಿತ್ತು. ಆಧುನಿಕ ದಿನಗಳಲ್ಲಿ ಕವಿತೆಗಳು ಆಸರೆಯಾದದ್ದು ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು. ಪುರುಷರ ಕವಿತೆಗಳು ಕ್ಲೀಷೆಗಳ ನಡುವೆ ತೊಳಲಾಡುತ್ತಿದ್ದರೆ, ಮಹಿಳೆಯ ಸಾಲುಗಳು ಒರೆಯಿಂದೆಳೆದ ಕತ್ತಿಯಂತ ಹಲವರ ಕಣ್ಣು ಕುಕ್ಕ ತೊಡಗಿದ್ದು ಸತ್ಯ. ಇಲ್ಲಿರುವ ಕವಿತೆಗಳಲ್ಲಿ ಅಂತಹ ಗುಣಲಕ್ಷಣಗಳುಳ್ಳ ಹಲವು ಕವಿತೆಗಳಿವೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE