ಕವಿ ಅನಿತ.ಪಿ.ಕುಮಾರ್ ಅವರ ಕವನ ಸಂಕಲನ ಕಾವ್ಯ ಪುಷ್ಕರ. ಈ ಸಂಕಲನದಲ್ಲಿ ಸುಮಾರು 74 ಕವನಗಳಿವೆ. ತಾಯಿ ತಂದೆ ಗುರುವಿನ ಮಹತ್ವ,ನಾಡು ನುಡಿ ಭಾಷಾ ಪ್ರೇಮ, ದೇಶ ಗಡಿ ಯೋಧರ ಕುರಿತಾದ ಕವನ, ನಿಸರ್ಗ ಪ್ರೀತಿ, ಪ್ರಾಣಿ ಪಕ್ಷಿ ಪರಿಸರ ಸಂರಕ್ಷಣೆ, ಶಿಶುಗೀತೆ, ಹೆಣ್ಣಿನ ಬಗ್ಗೆ ಕವನ, ಸಾಮಾಜಿಕ ಕಳಕಳಿಯುಳ್ಳ ಕವನ, ರೈತನ ಶ್ರಮ, ಮಣ್ಣಿನ ಮಹತ್ವ, ಪ್ರೇಮಗೀತೆಗಳು, ಬಂಡಾಯ ಕವನ, ಸ್ನೇಹ, ವಿವಿಧತೆಯನ್ನು ಎತ್ತಿ ತೋರಿಸುವ ಕವನಗಳ ಗುಚ್ಛ ಇದಾಗಿದೆ...
ಅನಿತ.ಪಿ.ಕೆ ಎಂಬ ಕಾವ್ಯನಾಮವಿರುವ ಅನಿತ ಪ್ರಸನ್ನಕುಮಾರ್ ಅವರು ಬೆಂಗಳೂರಿನವರು. ಹವ್ಯಾಸಿ ಬರಹಗಾರ್ತಿ,ಹಾಡುಗಾರ್ತಿಯಾಗಿರುವ ಇವರು ಕರ ಮುಗಿವೆ ಚಾಮುಂಡಿ ತಾಯೆ ಹಾಗೂ ಬಾಲಕೃಷ್ಣ ಸಾಹಿತ್ಯದ ಭಕ್ತಿಗೀತೆ ಸಿಡಿಗಳನ್ನು ಹೊರತಂದಿದ್ದಾರೆ. ಕೃತಿ: " ಕಾವ್ಯ ಪುಷ್ಕರ " ಎಂಬ ಕವನ ಸಂಕಲನ ಹೊರ ಬಂದಿದೆ. ಪ್ರಶಸ್ತಿ: ಕನ್ನಡ ಕವನ ರಚನೆಗಾಗಿ 2022ರಲ್ಲಿ ಇಂಡಿಯಾ ಸ್ಟಾರ್ ರಿಪಬ್ಲಿಕ್ ಪ್ರಶಸ್ತಿ ಲಭ್ಯವಾಗಿದೆ. ...
READ MORE