ಲಕ್ಷ್ಮೀ ವಿ ಭಟ್ ಅವರ ಕವನ ಸಂಕಲನ ಕಾವ್ಯ ಮೃಷ್ಟಾನ್ನ. ಕೊಳ್ಚಪ್ಪೆ ಗೋವಿಂದ ಭಟ್ ಅವರು ಈ ಕೃತಿಯ ಬೆನ್ನುಡಿ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ ಈ ಕೃತಿಯು ಕನ್ನಡ ಕಾವ್ಯದ ವಿವಿಧ ಉಪಪ್ರಕಾರಗಳ ಪ್ರಾತಿನಿಧಿಕ ನೂರಎಂಟು ಕವನಗಳನ್ನು ಒಳಗೊಂಡಿದೆ. ಈ ವೈವಿಧ್ಯತೆ ಸಂಕಲನದ ಉಪಯುಕ್ತತೆ ಮತ್ತು ರಸಾಸ್ವಾದಕ್ಕೆ ಪೂರಕವಾಗಿದೆ ಎಂದಿದ್ದಾರೆ.
ಲೇಖಕಿ ಲಕ್ಷ್ಮೀ ವಿ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರದವರು. ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. ಎಂ. ಎ, ಬಿ.ಎಡ್ ಪದವೀಧರರು. ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಛಂದಸ್ಸು ವಿಶೇಷ ಆಸಕ್ತರು. ಕೃತಿಗಳು ; ಹೊಸ ಬರಹಗಾರರ ಕೈಪಿಡಿ ಪ್ರಶಸ್ತಿಗಳು ; ಸುವರ್ಣ ಕನ್ನಡ ರತ್ನ ಪ್ರಶಸ್ತಿ (ಕೀರ್ತಿ ಪ್ರಕಾಶನ), ಸಾಹಿತ್ಯ ದೀವಿಗೆ ಪ್ರಶಸ್ತಿ ಹಾಗೂ ಕಾವ್ಯ ಕಣಜ ಪ್ರಶಸ್ತಿ ಲಭಿಸಿದೆ. ...
READ MORE