ಕಾವ್ಯ ಕಂಕಣ

Author : ದೊಡ್ಡರಂಗೇಗೌಡ

Pages 320

₹ 300.00




Year of Publication: 2017
Published by: ಕಾವ್ಯ ಕಲಾ ಶಾಲೆ
Address: ಸಾಯಿ ಸಂಕೀರ್ಣ, 4ನೇ ಮಹಡಿ, ಪೂರ್ವ ಭಾಗ, ಮ್ಯೂಜಿಯಂ ರಸ್ತೆ, ಬೆಂಗಳೂರು-560001

Synopsys

ಕಾವ್ಯ ಕಂಕಣ-ದೊಡ್ಡರಂಗೇಗೌಡರ ಕವನ ಸಂಕಲನ. ‘ ಕಾವ್ಯದ ಹುಟ್ಟು-ತನಗೆ ತಾನೇ ಆಗುವ, ಆಗಬೇಕಾದ ಸೃಷ್ಟಿಕ್ರಿಯೆ. ಇಲ್ಲಿ ತಿಣುಕಿ ಪ್ರಯೋಜನವಿಲ್ಲ. ಪಕ್ಕದವರತ್ತ ಇಣುಕಿ ಪ್ರಯೋಜನವಿಲ್ಲ.ಅಂತರಂಗದಲ್ಲಿ ನಮ್ಮನ್ನು ನಾವೇ ಕೆಣಕಿಕೊಂಡರೂ ಪ್ರಯೋಜನವಿಲ್ಲ. ಎಲ್ಲವೂ ಗಂಗೆಯ ಹಾಗೆ ಹರಿಯಬೇಕು. ಹರಿಯುತ್ತಾ ಶುದ್ಧಿಯಾಗಿ ಪವಿತ್ರವಾಗಬೇಕು. ಅಂತಹ ಕಾವ್ಯ ಬರೆಯಬೇಕೆಂಬುದೇ ನನ್ನ ಆಸೆ. ಅದು ಆಂತರಂಗದ ಅಭಿಪ್ಸೆಯೂ ಹೌದು. ಮಹತ್ವಾಕಾಂಕ್ಷೆಯೂ ಹೌದು’ ಎಂದು ಕೃತಿಯ ಬಗ್ಗೆ ಸ್ವತಃ ಕವಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಮಾಡಿದ್ದಾರೆ.

ಸಂಕಲನದಲ್ಲಿ 238 ಕವನಗಳಿವೆ. ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಸಹೃದಯತನ-ಇಲ್ಲಿಯ ಕವನಗಳ ಆಶಯ. ಇಲ್ಲಿ ಜೀವವಿದೆ. ಜೀವಾತ್ಮವಿದೆ. ಲೋಕವಿದೆ. ಲೋಕಾಂತವೂ ಕೀಲಿಕೈಯಾಗಿದೆ. ಆತ್ಮ-ಪರಮಾತ್ಮ, ಜೀವ -ಜಗತ್ತು, ಪ್ರಕೃತಿ-ಪುರುಷರ ಸಖ್ಯದಲ್ಲಿ ಅವರ ಕಾವ್ಯಲೋಕ ಬದುಕಿದೆ. ಎಲ್ಲರನ್ನೂ ಬದುಕಿಸಿಕೊಳ್ಳುತ್ತದೆ’ ಎಂದು ಪ್ರಶಂಸಿಸಿದ್ದಾರೆ.

ವಿಮರ್ಶಕ ಡಾ. ರಾಜಶೇಖರ ಮಠಪತಿ ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ದೊಡ್ಡರಂಗೇಗೌಡರ ಕವನಗಳಲ್ಲಿ ಜೀವನ ಪ್ರೀತಿಯ ಅದಮ್ಯ ಚೇತನ್ಯದ ಕಂಪನಗಳಿವೆ. ಕೇವಲ, ಸಂಗೀತಕ್ಕಾಗಿ ಹುಟ್ಟಿದ ಶಬ್ದಗಳ ಹಂದರವಲ್ಲ’ ಎಂದು ಶ್ಳಾಘಿಸಿದ್ದಾರೆ.

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Related Books