ಹನುಮಂತ ಅನಂತ ಪಾಟೀಲ ಅವರ ಎರಡನೇ ಕವನ ಸಂಕಲನ ’ ಕವನ ಬರುವುದಾದರೆ ಬರಲಿ’.
ಘನವಾದ ಬದುಕಿನ ತತ್ವವನ್ನು ಕವಿ ತಮ್ಮ ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಪಂಚಭೂತಾತ್ಮಕ ಜಗತ್ತು, ಪ್ರಕೃತಿ , ಪರಿಸರ ಕುರಿತಾದ ಮತ್ತು ಮಾನವ ಸಂಬಂಧಗಳ ಸುತ್ತ ಹೆಣೆದ ಮೌಲ್ಯವನ್ನು ವಿಚಾರಾತ್ಮಕ ನೆಲೆಯಿಂದ ಕವಿಯು ತಮ್ಮ ಕವನಗಳ ಮೂಲಕ ಓದುಗರಿಗೆ ನೀಡಿದ್ದಾರೆ.
ವಾಸ್ತವದಿಂದ ಆಧ್ಯಾತ್ಮಿಕ ಆಲೋಚನೆಗೆ ತಂದೊಡ್ಡುವ ಕಾವ್ಯಧ್ವನಿ ಇವರ ’ಕವನ ಬರುವುದಾದರೆ ಬರಲಿ’ ಕವನ ಸಂಕಲನದಲ್ಲಿ ಕಾಣಬಹುದಾಗಿದೆ.
ಹನುಮಂತ ಅನಂತ ಪಾಟೀಲ ( ಹ.ಅ.ಪಾಟೀಲ) ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದವರು. 1948ರ ಜೂನ್ 1 ರಂದು ಜನನ. ಧಾರವಾಡ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ. ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಪ್ರೌಢಶಿಕ್ಷಣ, ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ (ಸಿವಿಲ್) ಪೇದೆಯಾಗಿ (1975 ಏಪ್ರಿಲ್) ಸೇರ್ಪಡೆ, 2006ರಲ್ಲಿ ನಿವೃತ್ತಿ. ಪ್ರಕಟಿತ ಕೃತಿಗಳು: ಕೋವಿ ಮತ್ತು ಗುಬ್ಬಚ್ಚಿ ಗೂಡು, ಕವನ ಬರುವುದಾದರೆ ಬರಲಿ (ಕವನ ಸಂಕಲನಗಳು), ಯುಗಾದಿ ಒಂದು ಚಿಂತನೆ ಮತ್ತು ಇತರ ಲೇಖನಗಳು, ಇನ್ನೂ ಕೆಲ ಕೃತಿಗಳು ಅಚ್ಚಿನಲ್ಲಿವೆ. ರಿಪ್ಪನ್ ಪೇಟೆಯ ಕಲಾ ಕೌಸ್ತುಭ ಕನ್ನಡ ಸಂಘ, ...
READ MORE