ಕವಿ ಗೋಪಾಲಕೃಷ್ಣ ಅಡಿಗ ಅವರು ಬರೆದ ಕವನ ಸಂಕಲನ-ಕಟ್ಟುವೆವು ನಾವು. ಇಲ್ಲಿ ಸಾಮಾಜಿಕ ಪದ್ಯಗಳು, ಭಾವಗೀತೆಗಳೂ ಇವೆ. ಕಟ್ಟುವೆವು ನಾವು, ನಾವೆಲ್ಲರೂ ಒಂದೇ ಜಾತಿ, ಮೋಹನ ಮುರಳಿ, ವಿಜಯನಗರದ ನೆನಪು, ಸುಲಿಗೆಯೆಂಬ ಯಾಗ, ನೊಂದ ನುಡಿ, ಚರಮಗೀತೆ, ಎದೆಯು ಮರಳಿ ತೊಳಲುತಿದೆ, ಧೂಮ ಲೀಲೆ, ಒಂದು ಸಂಜೆ, ಕಲಕತ್ತೆಯಲ್ಲಿ ಕಾಳಿ, ಭಾರತದ ತಂದೆ ಗಾಂಧಿ ಹೀಗೆ ಒಟ್ಟು 36 ಕವನಗಳನ್ನು ಇಲ್ಲಿ ಸಂಕಲನಗೊಳಿಸಿದೆ.
ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...
READ MORE