ಕಸದ ತೊಟ್ಟಿಯಲಿ ಹಸುಗೂಸು/ ಇನ್ನೂ ಇನ್ನೂ/ ಹರಿದಂತಿಲ್ಲ ತಾಯಮಾಸು
ಜನಸಂದಣಿಯನು ತೂರಿ/ ನಿಡಿದಾದ ತೋಳುಗಳ ಚಾಚಿ/ ಬಾಚಿದಳು ಮಿಷನ್ ಆಸ್ಪತ್ರೆಯ ಮೇರಿ /ಗುಸಗುಸ ಪಿಸಪಿಸ/ ಅವಳಿನ್ನೂ ಕುಮಾರಿ!
ಮುದ್ದನುಕ್ಕಿಸುತಿದೆ ಹಸುಗೂಸು/ ಸಂಶಯವೇ ಇಲ್ಲ ಬಾಲಯೇಸು
ಕಂಡಳು, ಎತ್ತಿಕೊಂಡಳು/ ಎದೆಗೆ ಒತ್ತಿಕೊಂಡಳು/ ತಾಯಿ ಅವಳು ಕರುಣಾಳು.
- ಎನ್ನುವ ಸವಿತಾ ನಾಗಭೂಷಣ ಅವರು ಕನ್ನಡ ಕಾವ್ಯಲೋಕದ ವಿಶಿಷ್ಟ ಪ್ರತಿಭೆ. ’ಕರುಣಾಳು’ ಅವರು 2016ರಲ್ಲಿ ಪ್ರಕಟಿಸಿದ ಕವನಗಳ ಸಂಕಲನ. ಅವರ ಕಲ್ಪನೆಗೆ ಸಿಕ್ಕ ಸಣ್ಣ ಸಣ್ಣ ವಸ್ತುಗಳೂ ಕಾವ್ಯವಾಗಿ ಅರಳುವುದು ಒಂದು ಮಾಂತ್ರಿಕತೆ. ಅಕ್ಷರ ಪ್ರಕಾಶನ ಕೃತಿಯನ್ನು ಹೊರತಂದಿದೆ.
ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್ ...
READ MORE