12ನೇ ಶತಮಾನದ ಶರಣರನ್ನು ಹಾಗೂ ಅವರ ನಡೆಯನ್ನು ಅನುಸರಿಸಿಕೊಂಡು ಬಂದಿದ್ದ ಹಾಗೂ ತಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ವ್ಯಕ್ತಿಗಳ ಕುರಿತು ಶಿವಣ್ಣ ಇಜೇರಿ ಅವರು ಬರೆದ ಕವನ ಸಂಕಲನ-ಕರಗದ ಬೆಣ್ಣೆ. ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ತಮ್ಮ ಇಡೀ ಜೀವನವನ್ನು ಸವೆಸಿದ ಮಹನೀಯರ ಕುರಿತು ಪ್ರಶಂಸನೀಯ ಹಾಗೂ ಅನುಕರಣೀಯ ಭಾವದೊಂದಿಗೆ ಇಲ್ಲಿಯ ಕವಿತೆಗಳಿವೆ. ಮಾಯೆ ಎದುರು ಸೋಲದ ಘನ ಶರಣ ಅಲ್ಲಮಪ್ರಭುವಿನ ವ್ಯಕ್ತಿತ್ವ ಬಿಂಬಿಸುವ ಕವನವೂ ಇದೆ. ಅಲ್ಲಮಪ್ರಭು ಒಬ್ಬ ಕರಗದ ಬೆಣ್ಣೆ ಎಂದೇ ಕವಿಗಳು ಸಾಂಕೇತಿಸಿದ್ದು, ಕವನ ಸಂಕಲನಕ್ಕೂ ಹಾಗೂ ಶರಣರು ಮತ್ರೆತು ಅನುಯಾಯಿಗಳ ವ್ಯಕ್ತಿತ್ವಕ್ಕೂ ಮಹತ್ವ ತಂದು ಕೊಟ್ಟಿದೆ.
ಶಹಾಪುರದ ಅಡತಿ ಅಂಗಡಿವೊಂದರಲ್ಲಿ ಗುಮಾಸ್ತರಾದ ಶಿವಣ್ಣ ಇಜೇರಿ ಅವರು ಸಾಹಿತ್ಯಾಸಕ್ತರು. ವಚನ ಸಾಹಿತ್ಯ ತತ್ವ ಅನುಯಾಯಿ. ಉಡಿಯಲ್ಲಿಯ ಉರಿ, ಆಧುನಿಕ ವಚನಗಳು , ಕರಗದ ಬೆಣ್ಣೆ ಹೀಗೆ 5 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಶರಣರ ವಚನಗಳ ವಿಶ್ಲೇಷಕರು. ’ಬಸವ ಮಾರ್ಗ’ ಮಾಸಿಕದಲ್ಲಿ ಲೇಖಕರು. ಶರಣರ ವಿಚಾರ ಪ್ರಸಾರ-ಪ್ರಚಾರಕ್ಕಾಗಿ ಹಿರಿಯ ಸಾಹಿತಿ ದಿ.ಲಿಂಗಣ್ಣ ಸತ್ಯಂಪೇಟೆ ಅವರು ಬಸವ ಮಾರ್ಗ ಪ್ರತಿಷ್ಠಾನದಿಂದ ಆರಂಭಿಸಿದ”ಮನೆಯಲ್ಲಿ ಮಹಾಮನೆ’ ಚಿಂತನಾ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ...
READ MORE