'ಕಪ್ಪು ಫ್ರೇಮಿನ ಕನ್ನಡಕ’ ಕವನ ಸಂಕಲನವಾಗಿದ್ದು, ಹನಿಗವನಗಳು ಕುತೂಹಲ ಕೆರಳಿಸುತ್ತವೆ. ಸಾಮಾಜಿಕ ಜೀವನ ಒಳಗೊಂಡಂತೆ ಸಣ್ಣ ವಿಚಾರಗಳೂ ವಿಶಾಲ ಪರಿಧಿಯಲ್ಲಿ ತನ್ನ ವಿಸ್ತಾರತೆಯನ್ನು ಪಡೆದುಕೊಂಡಿದೆ. ಕವಿತೆಗಳ ಶೈಲಿಯಲ್ಲಿ ವಿನೂತನತೆ ತರಲು ಕವಿಗಳು ಪ್ರಯೋಗಶೀಲರಾಗಿದ್ದನ್ನು ಕಾಣಬಹುದು.
ರವೀಂದ್ರ ಸಿಂಗ್ ಅವರು ಎಂ.ಎ. ಪದವೀಧರರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಅಂಚೆ ವ್ಯಾಪ್ತಿಯ ಬೂರಮಾಕನಹಳ್ಳಿಯವರು. 1977ರ ಜುಲೈ 26 ರಂದು ಜನನ. ಸದ್ಯ, ಕೋಲಾರದ ಆದರ್ಶ ಕಾಲೇಜಿನಲ್ಲಿ ವ್ಯವಸ್ಥಾಪಕರು. ಋತುಗಾನ, ಕಪ್ಪು ಫ್ರೇಮಿನ ಕನ್ನಡಕ (ಕವನ ಸಂಕಲನಗಳು), ದಿಕ್ಕಾಪಾಲು -ಕಾದಂಬರಿ ಹಾಗೂ ಗುಣ ಸಂಪನ್ನ-ಕಥಾ ಸಂಕಲನ ಪ್ರಕಟಗೊಂಡಿವೆ. ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶೇಷ ಸಂಚಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಕನ್ನಡ ಸಾಂಸ್ಕೃತಿಕ ಅಕಾಡೆಮಿಯಿಂದ (2007) ಸಾಹಿತ್ಯ ರತ್ನ, ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಬೆಂಗಳೂರು ವತಿಯಿಂದ ಭಾರತ ರತ್ನ ಸರ್ . ...
READ MORE