ಪ್ರೀತಿ, ಪ್ರೇಮ, ಸ್ನೇಹ, ಪ್ರಕೃತಿಯ ಒಲವಿನ ಕವಿತೆಗಳು ಈ ಕೃತಿಯಲ್ಲಿ ಎದೆ ತುಂಬಿಕೊಂಡಿವೆ. ಆಸೆಗಳ ಓಣಿಯಲ್ಲಿ ಕುಳಿತು ಕಥೆ, ಕಾವ್ಯ ಕಟ್ಟುವ ರೀತಿ, ಪ್ರೇಮ ಕಥನಗಳ ಬಿಚ್ಚಿಟ್ಟಂತೆ ಕವಿತೆ ಸಾಲು ಸಾಲುಗಳಾಗಿವೆ. 'ಸುಗ್ಗಿಯ ಹಾಗೆ' ಪದ್ಯ ಹೀಗೆ ತೆರೆದುಕೊಳ್ಳುತ್ತದೆ. "ಸವಿ ಹೂ ನಿದ್ದೆಯಾ ಆ ಬೆಳಕೇ ಹೀಗೆ ಎಲ್ಲ ಕನಸುಗಳು ಸುರಿದ ಸುಗ್ಗಿಯ ಹಾಗೆ"
ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು 3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...
READ MORE