ಕವಯತ್ರಿ ರೇಣುಕಾ ನಿಡಗುಂದಿ ಅವರ ಕಣ್ಣ ಕಣಿವೆ ಕವನ ಸಂಕಲನವು ಪ್ರಚಲಿತ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುತ್ತದೆ. ಈ ಕವನಗಳ ಬಗ್ಗೆ ಪುರುಷೋತ್ತಮ ಬಿಳಿಮಲೆ ಅವರು, ’ನಗರದ ಕ್ರೌರ್ಯಗಳಿಗೆ ಉತ್ತರವೋ ಎಂಬಂತೆ ತಮ್ಮ ರಚನೆಗಳಲ್ಲಿ ಹೆಣ್ತನದ ಮೃದು ಮಧುರ ಭಾವಗಳನ್ನು ನವಿರಾಗಿ ತೆರೆದಿಡುತ್ತಾರೆ. ಈ ವಿಧದ ಭಾವಾಭಿವ್ಯಕ್ತಿಗೆ ಅವಶ್ಯಕವಾದ ಭಾಷೆಯೊಂದನ್ನು ಪ್ರತೀತಗೊಳಿಸಿಕೊಂಡ ಅವರು ಹಳೆಯ ರೂಪ-ಪ್ರತೀಕ-ಪ್ರತಿಮೆಗಳಿಗೆ ಹೊಸ ಅರ್ಥ ಕೊಡಲು ಪ್ರಯತ್ನಿಸಿದ್ದಾರೆ. ಆ ಮೂಲಕ ಪುರುಷ ಕೇಂದ್ರಿತ ನಗರಮುಖೀ ಬಾಹ್ಯ ಚಿಂತನೆಗಳಿಗೆ ಅಂತರ್ಮುಖಿ ಆಯಾಮ ನೀಡಿ, ಅವೆರಡರ ಸಂಘರ್ಷದಲ್ಲಿ ಹೊಸಭಾವ ಒಡಮೂಡುವಂತೆ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೇಣುಕಾ ನಿಡಗುಂದಿಯವರು ಮೂಲತಹ ಧಾರವಾಡದವರು. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ 'ಮುಖವಾಣಿ 'ಅಭಿಮತ' ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ, ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸಿದ್ದು ಅನೇಕ, ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ. 'ಓ ಮನಸೇ' ದೈಮಾಸಿಕ ಪತ್ರಿಕೆಯಲ್ಲಿ 'ರಾಜಧಾನಿ ಮೇಲ್' ಅಂಕಣ ಬರೆಹ ಬರೆಯುತ್ತಿದ್ದರು. ಬಿಡುಗಡೆಯಾದ ಕೃತಿಗಳು - ಮೊದಲ ಕವನ ಸಂಕಲನ " ಕಣ್ಣ ಕಣಿವೆ" 2008 ( ಪ್ರಗತಿ ಗ್ರಾಫಿಕ್ಸ್), “ದಿಲ್ಲಿ ಡೈರಿಯ ...
READ MORE