ಮಾರುತಿ ದಾಸಣ್ಣವರ ಕವನಗಳ ಸಂಗ್ರಹ ಕಣ್ಣ ಹಿಂದಿನ ಕಡಲು. ಇವರ ಮೂರನೆಯ ಕವನ ಸಂಕಲನವಿದು. ಅಪೂರ್ವ ಕಲಾವಿದರಾದ ಕವಿ ಜಬಿವುಲ್ಲಾ ಅಸದ್ ಅವರ ಕುಂಚದಲ್ಲಿ ಮೂಡಿದ ಮೋಹಕ ಮುಖಪುಟ, ವಾಸುದೇವ ನಾಡಿಗ್ ಅವರ ಮುನ್ನುಡಿ, ಶಾಂತಿ ಕೆ ಅಪ್ಪಣ್ಣ ಅವರ ಶುಭ ನುಡಿ ಸಂಕಲನದಲ್ಲಿದೆ. ಬೇಸಿಗೆಯಲ್ಲಿ ಬೀಸುವ ತಂಗಾಳಿಯ ಹಾಗೆ ಎದೆ ತಣಿಸುವ ಭಾವ, ಜೀವರಸ ಸೋಂಕಿಸುವ ಮೆಲು ಮಾತು, ಆರ್ಭಟ - ಆವೇಶಗಳಿರದ ಪಿಸುಗುಟ್ಟುವಿಕೆ ಇಲ್ಲಿನ ಕವನಗಳನ್ನು ಅವಾಹಿಸಿಕೊಂಡಿವೆ. ಸ್ವತಃ ಸಂಗೀತಬಲ್ಲ ಕವಿಯ ಕಲಾದೃಷ್ಟಿ ಸಂಕಲನದ ಗರಿಮೆಗೆ ಒಂದು ಮುಖ್ಯ ಕಾರಣ. ಕವಿತೆಗಳಲ್ಲಿನ ಗೇಯತೆ, ದೀರ್ಘಕಾಲ ನೆನಪಿಡಬಲ್ಲ, ನಮ್ಮೊಳಗೆ ನಾವೇ ಹಾಡಿಕೊಳ್ಳಬಲ್ಲ, ಲಯದೊಡನೆ ವಾಚಿಸಬಲ್ಲ ಕವಿತೆಗಳ ಕಡಲನ್ನು ನಮ್ಮ ಬೊಗಸೆಯಲ್ಲಿ ಸುರಿದು ಮೆಲುನಗೆ ನಗುವ ಕವಿಯ ಕಲೆಗೆ ತಲೆದೂಗುವುದೊಂದೇ ದಾರಿ.
ಕವಿ, ಕತೆಗಾರ ಮಾರುತಿ ದಾಸಣ್ಣವರ ಬೆಳಗಾವಿ ಜಿಲ್ಲೆಯ ಗೋಕಾವಿ ತಾಲೂಕಿನ ಹೊಸಹಟ್ಟಿ ಗ್ರಾಮದವರು. ವೃತ್ತಿಯಿಂದ ಕನ್ನಡ ಅಧ್ಯಾಪಕರು. ಸಾಹಿತ್ಯ ಓದು, ಬರವಣಿಗೆಯಲ್ಲಿ ಅಪಾರ ಆಸಕ್ತಿ. ಉತ್ತಮ ವಾಗ್ಮಿಯೂ ಆದ ಅವರ ಶೈಕ್ಷಣಿಕ, ಸಾಹಿತ್ಯಕ ಕಾರ್ಯಕ್ರಮಗಳು, ಚಿಂತನೆಗಳೂ ಸೇರಿದಂತೆ 23ರೇಡಿಯೊ ಕಾರ್ಯಕ್ರಮಗಳು ಮಡಿಕೇರಿ ಆಕಾಶವಾಣಿಯಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಇತ್ತಿಚಿನ ದಿನಗಳಲ್ಲಿ ವಿಮರ್ಶೆಗೂ ಹೆಜ್ಜೆ ಇಟ್ಟಿದ್ದಾರೆ. ಅವರ ‘ಮಬ್ಬುಗತ್ತಲೆಯ ಮಣ್ಣ ಹಣತೆ’ ಕತಾ ಸಂಕಲನ, ನಾನೂರುವ ಹೆಜ್ಜೆಗಳು, ನಡೆದೂ ಮುಗಿಯದ ಹಾದಿ( ಕವನ ಸಂಕಲನ) ಅವರ ಪ್ರಕಟಿತ ಕೃತಿಗಳು. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ ಬಹುಮಾನ, ದಲಿತ ಸಾಹಿತ್ಯ ಪರಿಷತ್ತು ಪುಸ್ತಕ ಬಹುಮಾನ, ಎಚ್ಚೆಸ್ಕೆ ಸಾಹಿತ್ಯ ಪುರಸ್ಕಾರ, ಕೆ. ...
READ MORE