`ಕಣ್ಮುಚ್ಚಿ ಕಂಡವರು’ ಶಂಕರ ಪಾಟೀಲ ಅವರ ಕವನಸಂಕಲನವಾಗಿದೆ. ಬೆಳಕಿಗಾಗಿ ಹಂಬಲಿಸುವ ಕವಿ ಶಂಕರ ಪಾಟೀಲರು ಚಿತ್ರಕಲಾವಿದರೂ ಹೌದು. ಕವನದಲ್ಲಿ ಹೇಳಲಾಗದ್ದನ್ನು ಚಿತ್ರಕಲೆ, ಚಿತ್ರಗಳಲ್ಲಿ ಬಿಂಬಿ ಬಿಸಲಾರದ್ದನ್ನು ಕವಿತೆಗಳ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.
ರವಿಶಂಕರ ಪಾಟೀಲ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ 1 ಜುಲೈ 1984ರಲ್ಲಿ ಜನಿಸಿದರು. ವೃತ್ತಿಯಿಂದ ದೈಹಿಕ ಶಿಕ್ಷಕರಾಗಿರುವ ಅವರು ಬರವಣಿಗೆಯಲ್ಲೂ ಹೆಚ್ಚಿನ ಆಸಕ್ತಿಹೊಂದಿದ್ದಾರೆ. ‘ದೃಷ್ಟಿಕೋನ’ ಎಂಬ ಕತಾ ಸಂಕಲನ ಪ್ರಕಟವಾಗಿದೆ. ಕತೆ, ಕವನ ಅವರ ಇಷ್ಟದ ಸಾಹಿತ್ಯ ಪ್ರಕಾರಗಳು. ...
READ MOREಹೊಸತು -ಮೇ- 2002
ಬೆಳಕಿಗಾಗಿ ಹಂಬಲಿಸುವ ಕವಿ ಶಂಕರ ಪಾಟೀಲರು ಚಿತ್ರಕಲಾವಿದರೂ ಹೌದು. ಕವನದಲ್ಲಿ ಹೇಳಲಾಗದ್ದನ್ನು ಚಿತ್ರಕಲೆಯಲ್ಲೂ, ಚಿತ್ರಗಳಲ್ಲಿ ಬಿಂಬಿಸಲಾರದ್ದನ್ನು ಕವಿತೆಗಳಲ್ಲೂ ಅವರು ಸಮರ್ಥವಾಗಿ ಹೇಳಿ ಮುಗಿಸಿದ್ದಾರೆ. ಕಣ್ಣಿನ ಬೆಳಕನ್ನು ಸೂರ್ಯನ ಬೆಳಕಿನೊಂದಿಗೆ ಅಳೆದು ನೋಡಿದ್ದಾರೆ. ಬಾಳಿನ ಮಗ್ಗಲುಗಳಲ್ಲೆಲ್ಲ ಬಣ್ಣದ ಬದುಕನ್ನು ಹುಡುಕುವ ಕವಿಗೆ ಕಣ್ಣೆರೆದರೂ ಬೆಳಕು, ಕಣ್ಮುಚ್ಚಿದರೂ ಅಂತರಂಗದಲ್ಲಿ ಬಣ್ಣದ ಬೆಳಕು! ಕವಿತೆಗಳ ಉದ್ದಕ್ಕೂ ಅವರು ಬೆಳಕು ಚೆಲ್ಲಿದುದು ಸತ್ಯದ ಕಡೆಗೆ ಮಾತ್ರ .