ಕವಿ ಆನಂದ ದೊಡ್ಡಕುರುಬರ ಅವರ ಕವನಸಂಕಲನ “ಕಾಣಿಸದ ಕೈ". ಕನಸುಗಳಿಲ್ಲದ, ಮಹಾತ್ವಾಕಾಂಕ್ಷೆಗಳಿಲ್ಲದ ಕಾಲ ಇದಾಗಿದೆ. ಜಾಗತೀಕರಣದ ಆಕ್ರಮಣದಿಂದ ಸೃಜನಶೀಲತೆ ತತ್ತರಿಸುತ್ತ ನಿಂತ ಕಾಲ ಇದಾಗಿದೆ, ಇಂತಹ ಕಾಲದಲ್ಲಿ ಆನಂದರು ವೃತ್ತಿಯಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರವೃತ್ತಿಯಿಂದ ಕವಿತೆ, ಕಥೆ ಬರೆಯುತ್ತ, ಅಕ್ಷರ ಸಾಹಿತ್ಯ ವೇದಿಕೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲೆ, ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತ, ಯುವ ಪೀಳಿಗೆಯನ್ನು ಸಾಹಿತ್ಯ ಮತ್ತು ಸಂಸ್ಕೃತಿಯತ್ತ ಸೆಳೆಯುತ್ತಿರುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ ಎಂದು ಡಾ. ಸಿ ಕೊಟ್ರೇಶ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ.
ಆನಂದ ಫ. ದೊಡ್ಡ ಕುರುಬರ ಅವರು ಪ್ರಸ್ತುತ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಆಡೂರು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಕೃತಿಗಳು: ಕಾಣಿಸದ ಕೈ, ಅರಳುವ ಮೊಗ್ಗುಗಳು. ...
READ MORE