ಕವಿ ಜೆ.ಪಿ.ರಾಜರತ್ನಂ ಅವರು ಸಂಪಾದಿಸಿದ ಕೃತಿ-ಕಂದನ ಕಾವ್ಯಮಾಲೆ. ಮೈಸೂರಿನಲ್ಲಿರುವ ಶಿಶುವಿಹಾರವೊಂದರ ಆಯ್ದ ಮಕ್ಕಳನ್ನು ಮಾತನಾಡಿಸಿ ಅವರಿಂದ ಕೇಳಿ ಕಲಿತ ಕವನಗಳಿವು. ಇಲ್ಲಿಯ ಕರ್ಣಾಟಕ ಕಾಳಿಂಗ ಎಂಬ ಕವನವು ಗೋವಿನ ಕತೆಯ ಆದಿ ಭಾಗ. ಶಿವರಾಮ ಕಾರಂತ, ಕೆ.ಪಿ.ಪುಟ್ಟಪ್ಪ, ಎಂ.ವೀ. ಸೀತಾರಾಮಯ್ಯ, ದ.ರಾ. ಬೇಂದ್ರೆ ಸೇರಿದಂತೆ ಇತರರು ಮಕ್ಕಳಿಗಾಗಿ ಬರೆದ ಕವನಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.ಒಟ್ಟು 39 ಕವನಗಳು ಇಲ್ಲಿವೆ.
ಪುರಂದರ ದಾಸರ ಡೊಂಕುಬಾಲದ ನಾಯಕರೇ ನೀವೇನೂಟವ ಮಾಡಿದಿರಿ, ಕವಿಶಿಷ್ಯ ಅವರ ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಳಿಯಲ್ಲಿ ನಿನ್ನಯ ಠಾವ- ಇಂತಹ ವಿಶಿಷ್ಟವಾದ ಹಾಡುಗಳು ಇಲ್ಲಿ ಸಂಕಲನಗೊಂಡಿವೆ.
ಈ ಕೃತಿಯು ಮೊದಲು 1933ರಲ್ಲಿ (ಪುಟ: 57, ಬೆಲೆ: 00:18 ರೂ.) ಬೆಂಗಳೂರಿನ ರಾಮಮೋಹನ ಕಂಪನಿಯು ಪ್ರಕಟಿಸಿತ್ತು.
ಈ ಕೃತಿಯು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರುಮುದ್ರಣಗೊಂಡಿದೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE