ಕವಿ ಲಿಂಗಾರೆಡ್ಡಿ ಶೇರಿ ಅವರ ಕವನ ಸಂಕಲನ-ಕನಸು ಕೆಡಿಸಿದ ಕೋಳಿ. ಸಂಕಲನದಲ್ಲಿಒಟ್ಟು 66 ಕವನಗಳಿವೆ. ಕನಸು ಕೆಡಿಸಿದ ಕೋಳಿ, ನಾವು ಭವಿಗಳು, ಅಡವಿ ಸಿದ್ಧನ ಕಥೆ, ಹೊಳೆ ದಾಟಿದ ಮೇಲೆ, ಬಾಗಿದ ಕನಕ, ಮೌನ ಪಕ್ಷಿ, ನಿನ್ನೆ ನಾಳೆಗಳ ನಡುವೆ, ಶರಣವ್ವ, ಬಸವಣ್ಣ, ಅಕ್ಕ ಕೇಳವ್ವ ಮೊದಲಾದ ಕವನಗಳು ಗಮನಾರ್ಹವಾಗಿವೆ. ಬೆನ್ನುಡಿ ಬರೆದ ಸಾಹಿತಿ ಪ್ರಭಾಕರ ಜೋಶಿ ‘ಈ ಸಂಕಲನದ ' ಜೀತಗಾರ ಕರಿಹನುಮನ ಸುಪ್ರಭಾತ' ಕವಿತೆಯಂತೂ ಜೀವಪರ ಕಾಳಜಿಗೆ ಸಾಕ್ಷ್ಯ ನುಡಿಯುತ್ತದೆ. ಕಥನ ಕವಿತೆಗಳು, ಘಟನೆ ಪ್ರಣೀತ ವಸ್ತು ಬಳಸಿಕೊಂಡು ಕಾವ್ಯ ಕಟ್ಟುವ ಕಲೆ ಇವರಿಗೆ ಸಿದ್ಧಿಸಿದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಲಿಂಗಾರೆಡ್ಡಿ ಸೇರಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು. ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...
READ MORE