‘ಕನಕಾಂಬರಿ’ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಸ್. ವೆಂಕಟೇಶಮೂರ್ತಿ ಅವರ ಬೆನ್ನುಡಿಯ ಮಾತುಗಳಿವೆ. ಪ್ರೀತಿ ಈ ಸಂಗ್ರಹದ ಕೇಂದ್ರ ಬಿಂದು, ಈ ಕೇಂದ್ರದ ಸುತ್ತಾ ಶೃಂಗಾರದ ಅನೇಕ ಪಲುಕುಗಳು ಪೇರಿ ಹೊಡೆಯುತ್ತಿವೆ. ಹಿಂದಿನ ಸಂಕಲನದಲ್ಲಿ ಕಾಣುವಂತೆ ಇಲ್ಲಿ ರೂಪಕಗಳನ್ನು ಕಡೆದಿಡುವ ಯತ್ನವಿಲ್ಲ. ಪ್ರೀತಿಯ ಆರ್ತಭಾವದಲ್ಲಿ ಸಹಜವಾಗಿ ಹೊರಹೊಮ್ಮುವ ಭಾವಾಲಾಪನೆ ಈ ಕವಿತೆಗಳ ಜೀವಲಕ್ಷಣವೆನ್ನಬಹುದು. ಭಾವಲಿಪ್ತವಾದ ಪದಲಾಲಿಲ್ಯ, ಒಂದು ನವುರಾದ ಅರ್ಥದ ಹೊಳಪು ಕೂಡಿಕೊಳ್ಳುತ್ತವೆ. ಅಂತಹ ರಚನೆಗಳನ್ನು ಓದುತ್ತಾ ಓದುತ್ತಾ ಸಂತೋಷ ಪಡಬಹುದು ಎನ್ನುತ್ತಾರೆ. ಹೂ ತುಂಬಿದ ಸಾಲುಮರದ ನೆರಳಲ್ಲಿ ನಡೆದ ಹಾಗೆ ಇಂಥ ರಚನೆಗಳ ಓದು. ಪ್ರತಿಮೆಗಳನ್ನು ಪರಿಭ್ರಮಿಸುತ್ತಾ ಗರ್ಭಾಶಯಕ್ಕೆ ಪ್ರವೇಶಿಸುವ ಧ್ಯಾನದ ನೆಲೆ ಇಲ್ಲಿ ಅನಗತ್ಯವೆನಿಸುತ್ತದೆ ಎನ್ನುತ್ತಾರೆ.
ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...
READ MORE