‘ಕನಕಾಂಬರಿ’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವನ ಸಂಕಲನವಾಗಿದೆ. ಹದಿಹರೆಯದ ವಯಸ್ಸು ಬಣ್ಣಬಣ್ಣದ ಕನಸುಗಳನ್ನು ಹೊಂದಿರುವಂಥದು. ಜಗತ್ತೇ ಕಾಮನಬಿಲ್ಲಿನ ಏಳು ವರ್ಣಗಳಾಗಿ ಗೋಚರಿಸುವ ಮತ್ತು ಅಂಕೆಯಿಲ್ಲದ ಮನಸೊಂದು ಕಲ್ಪನಾಲೋಕದಲ್ಲಿ ವಿಹರಿಸುತ್ತ ಪ್ರೇಮ ಗೀತೆಗಳನ್ನು ಗೀಚುತ್ತ-ಹರಿಯುತ್ತ-ಗುನುಗುತ್ತ ಇರುವಂಥ ಕಾಲ. ಈ ಹಿಂದೆ ಸಾಕಷ್ಟು ದಲಿತಪರ ಬಂಡಾಯ ಕಾವ್ಯಗಳನ್ನು ಬರೆದು ಹೆಜ್ಜೆ ಮೂಡಿಸಿದ ಚಿನ್ನಸ್ವಾಮಿ ಹೊಸ ಪ್ರಯೋಗವೆಂಬಂತೆ ಪ್ರೇಮ ಕವನಗಳ ರಚನೆಗೆ ಕೈಹಾಕಿದ್ದಾರೆ.
ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...
READ MOREಹೊಸತು-2004- ಸಪ್ಟಂಬರ್
ಹದಿಹರೆಯದ ವಯಸ್ಸು ಬಣ್ಣಬಣ್ಣದ ಕನಸುಗಳನ್ನು ಹೊಂದಿರುವಂಥದು. ಜಗತ್ತೇ ಕಾಮನಬಿಲ್ಲಿನ ಏಳು ವರ್ಣ ಗಳಾಗಿ ಗೋಚರಿಸುವ ಮತ್ತು ಅಂಕೆಯಿಲ್ಲದ ಮನಸೊಂದು ಕಲ್ಪನಾಲೋಕದಲ್ಲಿ ವಿಹರಿಸುತ್ತ ಪ್ರೇಮ ಗೀತೆಗಳನ್ನು ಗೀಚುತ್ತ-ಹರಿಯುತ್ತ-ಗುನುಗುತ್ತ ಇರುವಂಥ ಕಾಲ. ಈ ಹಿಂದೆ ಸಾಕಷ್ಟು ದಲಿತಪರ ಬಂಡಾಯ ಕಾವ್ಯಗಳನ್ನು ಬರೆದು ಹೆಜ್ಜೆ ಮೂಡಿಸಿದ ಚಿನ್ನಸ್ವಾಮಿ ಹೊಸ ಪ್ರಯೋಗವೆಂಬಂತೆ ಪ್ರೇಮ ಕವನಗಳ ರಚನೆಗೆ ಕೈಹಾಕಿದ್ದಾರೆ. ಸಂಕಲನದ ಹೆಚ್ಚಿನ ಎಲ್ಲ ಪದ್ಯಗಳೂ ಪ್ರೀತಿ-ಪ್ರೇಮಗಳ ಸುತ್ತ ಹೆಣೆಯಲಾಗಿದ್ದು ಒಟ್ಟು ೨೬ ಕವನಗಳಿವೆ. ಹೇರಳವಾಗಿ ಉಪಮೇಯ- ಉಪಮಾನವನ್ನು ಬಳಸಿಕೊಳ್ಳುತ್ತ ನಿಸರ್ಗವನ್ನು ವರ್ಣಿಸಿದ ಕೆಲ ಕವಿತೆಗಳೂ ಇಲ್ಲಿವೆ. ಕಾವ್ಯ ಸೃಷ್ಟಿಸುವ ಅನುಭವವೂ ವಿಸ್ಮಯವಾಗಿದೆ.