ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಅದನ್ನು ಅಕ್ಷರಕ್ಕಿಳಿಸುವ ಸಂವೇದನಾಶೀಲ ಬರೆಹಗಾರ್ತಿ. ಸಮಾಜದ ವೈಪರಿತ್ಯಗಳು, ಅಸಮಾನತೆಗಳು, ಸಂಕೀರ್ಣತೆಗಳನ್ನು ಹೇಮಲತಾ ಅರಳುಗಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಫೇಸ್ಬುಕ್ನಲ್ಲಿ ಕವಿತೆಗಳ ಮೂಲಕ ಗಮನ ಸೆಳೆದಿರುವ ಹೇಮಲತಾ ಮೂರ್ತಿ ಅವರ ಹೊಸ ಕವನಸಂಕಲನ “ಕಳಚಿಟ್ಟಿದ್ದೇನೆ ಇದೋ ನಿರ್ವಾಣ'ದಲ್ಲಿ ಅನೇಕ ಗಟ್ಟಿ ಕವಿತೆಗಳಿವೆ.“ನಿನ್ನೊಲವೆಂದರೆ, ಕೆನೆಮೊಸರಿನ ಅನ್ನವನು ಕಲಸಿ,ತುತ್ತು ತಿಂದನಂತರ, ಚೀಪುವ, ಬೆರಳರುಚಿ' ಹೀಗೆ ಹಲವು ಹೃದಯಸ್ಪರ್ಶಿ ಕವನಗಳು ಈ ಪುಸ್ತಕದಲ್ಲಿದೆ.
ಬೆಂಗಳೂರಿನ ವಿಜಯನಗರದ ಗುರುಸ್ವಾಮಿ ಮತ್ತು ಪಾರ್ವತಮ್ಮ ದಂಪತಿಯ ಹಿರಿಯ ಪುತ್ರಿ ಹೇಮಲತಾ ಮೂರ್ತಿ. ಓದಿದ್ದು ಸರಕಾರಿ ಶಾಲೆಯಲ್ಲಿ, ಕಷ್ಟದಲ್ಲೇ ಜೀವನ ನಡೆಸಿದ ಇವರ ಕುಟುಂಬ ಬಡತನವನ್ನು ಎದುರಿಸಿದ್ದಾರೆ. ಹತ್ತನೇ ತರಗತಿ ಮುಗಿಸಿ ಪದವಿಪೂರ್ವ ಶಿಕ್ಷಣಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಬಡತನದ ಕಾರಣಕ್ಕೆ ಓದು ಮುಂದುವರೆಸಲಾಗದೇ ಹೇಮಲತಾ ಮೂರ್ತಿಯವರು ಮದುವೆ ಮಾಡಿಕೊಳ್ಳಬೇಕಾಯಿತು. ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಮೂರ್ತಿಯವರು ಬಾಳ ಸಂಗಾತಿಯಾಗಿ ಹೇಮಲತಾ ಮೂರ್ತಿಯವರೊಂದಿಗೆ ಜೊತೆಯಾದರು. ಕಾರ್ಯನಿಮಿತ್ತ ಮೂರ್ತಿಯವರಿಗೆ ಭದ್ರಾವತಿಗೆ ವರ್ಗಾವಣೆಯಾದಾಗ ಅಲ್ಲಿಗೆ ತೆರಳಿದ ಹೇಮಲತಾ ಮೂರ್ತಿಯವರು ಕುಟುಂಬದ ಜವಾಬ್ದಾರಿ ಹೊತ್ತುಕೊಂಡೇ ತಮ್ಮ ಇಬ್ಬರು ಮಕ್ಕಳನ್ನು ಸಾಕಿ ಸಲಹುತ್ತಾ ...
READ MORE