‘ಕಲಾವಿದನ ಕೊಲೆ’ ಲೇಖಕ ಹರಿಯಪ್ಪ ಪೇಜಾವರ ಅವರ ಕವನ ಸಂಕಲನ. ಇಲ್ಲಿ ಕಲಾವಿದನ ಕೊಲೆ, ಯಾಕಳುವರೋ, ಮನೆಯೊಕ್ಕಲು, ಆದರ್ಶ, ಸರಳತೆ, ಜೋಡಿ ಕೊಲೆ, ಆತ್ಮಹತ್ಯೆಗೆಳಸುವ ಸಖನಿಗೆ, ವರ್ಣ, ಸ್ವಾತಂತ್ರ್ಯ, ಎಲ್ಲ ದಾಕ್ಷಿಣ್ಯಕ್ಕಾಗಿ, ಅಖಂಡವಾಗಲಿ ಕಾಲ, ಕಳ್ಳ ಪೊಲೀಸ್ ಆಟ, ಜನ ನನ್ನಿಂದ ಏನನ್ನು ಬಯಸುತ್ತಾರೆ, ಒಳ್ಳೆಯದು ಯಾವುದೂ ಹಾಗೇ ಬರುವುದಿಲ್ಲ, ಅಮ್ಮ- ಕೆಲವು ಟಿಪ್ಪಣಿಗಳು, ಭಯೋತ್ಪಾದಕ, ಜಕ್ಕಿಣಿ ಲಾವಣಿ, ದೇವರಿಗೂ ಹತ್ತಿರ, ಜೀವರಸ, ಕೈಯಿಟ್ಟು ತಬ್ಬಿ ಮಲಗದೆ, ಬುಷ್-ಲಾಡೆನ್ ಗಳ ಮಾಸ್ಟ್ರು, ಸೇಡು ಕೊನೆಗೂ ತೀರಲಿಲ್ಲ, ಬಿತ್ತಿದ್ದು ಬೆಳೆದದ್ದು, ಎಲ್ಲ ಸರಿ ಆದರೆ, ಸನ್ನಿವೇಶ, ಪಕ್ಷಪಾತ ಸೇರಿದಂತೆ 77 ಕವಿತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಲೇಖಕ ಹರಿಯಪ್ಪ ಪೇಜಾವರ ಮೂಲತಃ ಮಂಗಳೂರಿನ ಬಜ್ಪೆ ಸಮೀಪದ ಪೇಜಾವರದವರು. ಪೇಜಾವರ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ, ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಬಿ.ಕಾಂ. ಪದವಿ, ಮಂಗಳಗಂಗೋತ್ರಿಯಲ್ಲಿ ಎಂ.ಎ ಹಾಗೂ 1989ರಿಂದ ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದಾರೆ. ಕೃತಿಗಳು: ಕವನಸಂಕಲನಗಳು- ವ್ಯಕ್ತಿ ಮತ್ತು ವ್ಯಕ್ತ(1986), ನೆನದದ್ದು ಹೆಚ್ಚಾಗಿ(2001), ಕಲಾವಿದನ ಕೊಲೆ(2012) , ಕಥಾಸಂಕಲನ: ಮಾನ ಮತ್ತು ಇತರ ಕಥೆಗಳು(1996), ಇನ್ನೊಂದು ಗ್ರಹ (2015) ಹಾಗೂ ಲೇಖನ ಸಂಗ್ರಹ- ಯಾರ ಮುಲಾಜೂ ಇಲ್ಲದೆ(2016). ಪ್ರಶಸ್ತಿ ಗೌರವ: ಇವರ ವ್ಯಕ್ತಿ ಮತ್ತು ವ್ಯಕ್ತ ಸಂಕಲನಕ್ಕಾಗಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮಾನ ಮತ್ತು ಇತರ ಕಥೆಗಳಿಗೆ ವರ್ಧಮಾನ ...
READ MORE