‘ಕಾಡುವ ಕವಿತೆಗಳು’ ಎ.ಎನ್. ರಮೇಶ್ ಗುಬ್ಬಿ ಅವರ ಕವನ ಸಂಕಲನವಾಗಿದೆ. ಇಲ್ಲಿನ ಕವಿತೆಗಳು ಮೂಡಿದ್ದು ಬದುಕಿನ ಕಾಡುವ ಘಟ್ಟಗಳಲ್ಲೆ. ಮನ ತೀವ್ರವಾಗಿ ಕುಗ್ಗಿದಾಗ, ಅತೀವವಾಗಿ ಹಿಗ್ಗಿದಾಗ, ಕುಣಿದಾಗ, ನಲಿದಾಗ, ಕಮರಿದಾಗ ಮೂಡಿದ ಭಾವಗಳು ಅಕ್ಷರರೂಪ ಪಡೆದು ಕವಿತೆಗಳಾದವು. ಇಲ್ಲಿನ ಕವಿತೆಗಳು ಯಾರಿಗೂ ತಿಳಿ ಹೇಳಕ್ಕಾಗಿಯೋ, ಉಪದೇಶ ಕೊಡಲಿಕ್ಕಾಗಿಯೋ ಬರೆದಿರುವುದಲ್ಲ. ವಿಭಿನ್ನ ಸನ್ನಿವೇಶ, ಸಂದಿಗ್ಧಗಳಲ್ಲಿ ಹೇಳಿಕೊಂಡ, ಸಂತೈಸಿಕೊಂಡ ಸಂಭ್ರಮಿಸಿಕೊಂಡ ನುಡಿಗಳು ಕವಿತೆಗಳಾಗಿ ಮೂಡಿಬಂದವು.
ಕವಿಯೂ ಹೇಳುವಂತೆ: ಒಂದು ವಿಶಿಷ್ಟ ಚೈತನ್ಯವನ್ನೂ ಮತ್ತು ಧನಾತ್ಮಕ ಕಂಪನಗಳನ್ನು ನೀಡುತ್ತಿತ್ತು. ಅಂತಹ ಕವಿತೆಗಳ ಒಟ್ಟು ಸಂಗ್ರಹವೇ ಈ ಸಂಕಲನವಾಗಿದೆ.
ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ. ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ...
READ MORE