ಪ್ರೀತಿ, ಪ್ರೇಮ, ಕ್ರಾಂತಿಯ ಹಲವಾರು ತಾರುಣ್ಯದ ಬಯಕೆಗಳಿಗೆ ಇಲ್ಲಿಯ ಕವನಗಳು ದನಿಯಾಗಿವೆ. ಸಾಮಾಜಿಕ ಕಾಳಜಿಯಾಗಬೇಕಾದ ಮಾನವನ ತದ್ವಿರುದ್ಧ ವರ್ತನೆಗಳನ್ನು ಪ್ರಶ್ನಿಸುತ್ತವೆ. ಅಲ್ಲದೆ, ಸಮಾಜಮುಖಿ ಆಶಾದಾಯಕ ಬೆಳವಣಿಗೆಯ ಬಗೆಗೂ ಸೂಕ್ಷ್ಮವಾಗಿ ಕವಿಗಳು ಕವನಗಳ ಮೂಲಕ ಮಾತನಾಡಿದ್ದಾರೆ.
ಗೌತಮ ಎ. ಸಕ್ಕರಕಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದವರು. ಬಿ.ಇಡಿ. ಪದವೀಧರರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವೀಧರರು. ಜಾನಪದ ವಿದ್ವಾಂಸ ಡಾ.ಬಸವರಾಜ ಪೋಲಿಸಪಾಟಿಲರ ಬದುಕು ಬರಹ ಕುರಿತು ಪಿಎಚ್ ಡಿಗಾಗಿ ಸಂಶೋಧನೆ, ಹಿಂದುಳಿದ ದಲಿತ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ಹೋರಾಟಗಾರರು. ಅವರ ಮೊದಲ ’ಕಾಡುತ್ತಿವೆ ಕನಸುಗಳು’ಕವನಗಳ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯಕ್ಕೆ ಆಯ್ಕೆಯಾಗಿದೆ. ...
READ MORE