`ಕಾಡತಾವ ನೆನಪು’ ಕೃತಿಯು ವಿಜಯಕುಮಾರ ಸತ್ಯಂಪೇಟೆ ಅವರ ಕವನಸಂಕಲನವಾಗಿದೆ. ಇಲ್ಲಿ ಕವಿಯು ತನ್ನ ಜೀವನದಲ್ಲಿ ಕಂಡಂತಹ ನೋವು ನಲಿವುಗಳನ್ನು ದಾಖಲಿಸಿದ್ದಾರೆ. ಕವಿ ಹೇಳುವಂತೆ ಅವರ ಮನಸ್ಸಿಗೆ ಆಗಾಗ ತೋಚಿದ ವಿಷಯ ಘಟನೆಗಳು ಹೊಳೆದಾಗ ಹಾಗೆಯೇ ಸೆರೆಯಾಗಿ ಹಿಡಿದ ‘ಕಾಡತಾವ ನೆನಪು’ ಕನಕವರಿಕೆಗಳು ಮಾತ್ರ. ನಿಧಾನವಾಗಿ ಓದುತ್ತ, ಆಸ್ವಾದಿಸುತ್ತ, ಅರ್ಥ ಮಾಡಿಕೊಳ್ಳುತ್ತ ಬದುಕಿನ ಜರಡಿಗೆ ಸಿಲುಕಿ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳುತ್ತ, ಎಲ್ಲೋ ಕಳೇದೆಹೋದನೇನೋ ಅಂದು ಕೊಳ್ಳುವಷ್ಟರಲ್ಲಿ ದುತ್ತನೇ ತನ್ನೆಲ್ಲಾ ವಯೋಮಾನದ ಹಂಬಲಗಳನ್ನೇಲ್ಲಾ ಕಾವ್ಯವಾಗಿ ಕಟ್ಟಲು ಯತ್ನಿಸುತ್ತ ಈಗ ಈ ಕವನ ಸಂಕಲನದೊಂದಿಗೆ ಮುಖಾಮುಖಿಯಾಗಿರುವದು ಸಂತಸದ ಸಂಗತಿ. ಈ ಸಂಕಲನದಲ್ಲಿ ಪ್ರೀತಿಯಿಂದ, ಪ್ರೇಮವಿದೆ, ಅನುರಾಗವಿದೆ, ಕಳೆದುಕೊಂಡ ದುಃಖವಿದೆ. ಹೀಗೆ ಒಂದು 'ಕಾವ್ಯ' ಬಯಸುವ ಎಲ್ಲಾ ಆಯಾಮಗಳು ಈ ಸಂಕಲನದಲ್ಲಿವೆ.
ವಿಜಯಕುಮಾರ ಸತ್ಯಂಪೇಟೆ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಪುರದವರು. ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಕಾವ್ಯ, ಮಕ್ಕಳ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಕಾಡತವ ನೆನಪು(ಕಾವ್ಯ) ...
READ MORE