’ಕಡಲ ತೀರದ ಮೌನ’ ಕೃತಿಯು ಕವಿ ಶೋಭಾ ಸಾಗರ ಅವರ ಕವನಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಜೀವರಾಜ ಹ. ಛತ್ರದ ಅವರು, ‘ಕವಯಿತ್ರಿಯವರ ಶೀರ್ಷಿಕೆಯೇ ಅತೀ ಸುಂದರವಾಗಿದೆ. “ಕಡಲ ತೀರದ ಮೌನ” ಕಡಲಿಗೆ ಮತ್ತೊಂದು ಹೆಸರು ರತ್ನಾಕರ ಗಂಭೀರ ವಾರಿಧಿ ಎಂದು ಬೋರ್ಗರೆಯಲಾರದು ಮೌನವಾಗಿದ್ದುಕೊಂಡೆ ತನ್ನೊಳಗೆ ಮುತ್ತು ರತ್ನಗಳನ್ನು ಒಳಗೊಂಡಿರುತ್ತದೆ. ಹಾಗೆಯೆ, ಈ ಕೃತಿಯಲ್ಲಿರುವ ಮೌಲಿಕ ಕವನಗಳು ಕೂಡಾ ಕವಯಿತ್ರಿಗೆ ಭರವಸೆ ಮೂಡಿಸುವ ಲಕ್ಷಣಗಳನ್ನು ಹೊಂದಿದೆ.
ಸದರ ಕವನ ಸಂಕಲನವು ಒಟ್ಟು ಅರವತ್ತು ಕವನಗಳನ್ನು ಹೊಂದಿದೆ. ಪ್ರತಿಯೊಂದು ಕವನವೂ ಕೂಡ ವಸ್ತು ವೈವಿಧ್ಯತೆಯಿಂದ ಕೂಡಿದ್ದು, ಓದುಗನನ್ನು ಹಿಡಿದಿಡುವ ಶಕ್ತಿ ಪ್ರತಿ ಕವನದಲ್ಲಿ ಅಡಕವಾಗಿದೆ. ಕವಯಿತ್ರಿಯವರ ಮೊದಲನೇ ಕವನ ಭಾವ ಶರಧಿಯ ಮೊದಲ ನುಡಿಯೆ ಮೋಹಕವಾಗಿ ಮೂಡಿ ಬಂದಿದೆ. “ಹೊಮ್ಮಿಬಂದ ಒಡಲ ಕಡಲು ಕಣ್ಣೀರು ನಾನಾದೆ ದಡದ ಅಡಿಯ ಗುರುತು ಅಳಿದ ಮುನ್ನೀರು ನಾನಾದೆ” ಈ ಕವಿತೆಯಲ್ಲಿ ಕವಿಯು ಭಾವನೆಯ ಸಾಗರದಿ ಈಜಾಡಿ ಕೊನೆಗೆ ಕವನವೆಂಬ ಮುತ್ತನ್ನು ಪಡೆಯುವ ಬಗೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಶೋಭಾ ಅವರು ಮಲೆನಾಡಿನ ಮೂಲೆಯಲ್ಲಿಯ ಶಿರಾಳ ಕೊಪ್ಪದವರು. ಮಲೆನಾಡು ಮತ್ತು ಸಹ್ಯಾದ್ರಿ ತಪ್ಪಲಿನ ಸಮೀಪದವರು. ಆದ್ದರಿಂದ, ಈ ಪ್ರದೇಶದ ಛಾಯೆಯನ್ನೂ ಕವನಗಳನ್ನು ಕಾಣಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕಿ ಶೋಭಾ ಸಾಗರ ಅವರು ಎಂಬಿಎ ಪದವೀಧರರು. ಇಂಗ್ಲೆಂಡ್‌ನ ಒಂದು ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾರೆ. ಗಾಯನ ಮತ್ತು ಸಂಗೀತ ಸಂಯೋಜನೆ, ಸಾಹಿತ್ಯ, ಕರ್ನಾಟಕ ಮೂಲ ಜನಪದ ಗೀತೆಗಳು ಹಾಗೂ ನೃತ್ಯಗಳ ಸಂಶೋಧನೆ ಅವರ ಆಸಕ್ತಿ ಕ್ಷೇತ್ರಗಳು. ಇಂಗ್ಲೆಡ್ ನ ಕನ್ನಡ ಸಂಘ ದಲ್ಲಿ ‘ಕನ್ನಡ ಕಲಿ’ ಎನ್ನುವ ಉಪಕ್ರಮದಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. ಕೃತಿಗಳು: ಕಡಲ ತೀರದ ಮೌನ ...
READ MORE