ಕಡಲ ಒಡಲಿನಲಿ ಮುತ್ತು ಬಿತ್ತು-ಶ್ರೀಪಾದ ನಾರಾಯಣ ಶೆಟ್ಟಿ ಅವರ ಕವನ ಸಂಕಲನ. ರೂಪಕ ಮತ್ತು ಉಪಮೆಗಳನ್ನು ಬಳಸುವಾಗ ಕವಿಗೆ ಔಚಿತ್ಯ ಪ್ರಜ್ಞೆ ಇದೆ. ನಿಸರ್ಗದ ಚರಾಚರ ವಸ್ತುಗಳೇ ಅವರ ಅಭಿವ್ಯಕ್ತಿ ರೂಪಗಳಿಗೆ ವಾಹಕಗಳಾಗಿ ಕೆಲಸ ಮಾಡುತ್ತವೆ. ಆದರೆ ಕೇವಲ ಆ ನಿಸರ್ಗಸಿರಿಯ ವರ್ಣನೆಯಲ್ಲಿ ಮಾತ್ರ ಮೈಮರೆತು ಓದುಗರ ತಾಳ್ಮೆ ಪರೀಕ್ಷಿಸುವುದಿಲ್ಲ ಈ ಕವಿ. ನಿಸರ್ಗದ ಉಪಮೆಗಳ ಮೂಲಕವೇ ತಟ್ಟನೆ ಸಮಾಜ ಮುಖಿಯಾಗುವ ಒಳಪ್ರಜ್ಞೆ ವ್ಯವಸ್ಥೆಯ ಕರಾಳತೆಯ ಕಡೆಗೆ ಕರೆದೊಯ್ಯುತ್ತವೆ ಇಲ್ಲಿಯ ಕವಿತೆಗಳು.
ಲೇಖಕ ಶ್ರೀಪಾದ ನಾರಾಯಣ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಗ್ವಾ ಗ್ರಾಮದಲ್ಲಿ 1955 ಮೇ 14ರಂದು ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾದ ಅವರು ಕವನ ರಚನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಅವರು ಹಲವಾರು ಬಂಡಾಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ದಿನಕರ ದೇಸಾಯಿ-ಬದುಕು-ಬರಹ (ಮಹಾಪ್ರಬಂಧ), ಮೈತ್ರಿ, ಕಾವ್ಯ, ಕಾವ್ಯನಂದನ (ಕವನ ಸಂಗ್ರಹಗಳು), ಪ್ರಿಯಶರಾವತಿ, ಕಪ್ಪು ಜನರ ಕೆಂಪು ಕಾಶಿ (ಸಂಪಾದನೆ) ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ. ...
READ MORE