ಸಮಕಾಲೀನ ವಿದ್ಯಮಾನಗಳಿಗೆ ಗಾಢವಾಗಿ ಸ್ಪಂದಿಸಿದ, ವಿಭಿನ್ನ ಧೋರಣೆಯ ಕವಿಗಳ ವೈವಿಧ್ಯಪೂರ್ಣ ಕವನಗಳನ್ನು ‘ಕಾವ್ಯಯಾನ’ ಕವನ ಸಂಕಲನವು ಕನ್ನಡ ಕಾವ್ಯದ ನಿರಂತರ ಹರಿವಿನ ಪ್ರತೀಕದಂತಿದೆ. ಯುಗಾದಿಯ ನೆಪದಲ್ಲಿ ಏರ್ಪಾಡಾದ ಈ ಕವಿಗೋಷ್ಠಿಯಲ್ಲಿಯ ಕವನಗಳು, ಅಸಂಖ್ಯ ತಗಾದೆಗಳ ಸಂಕೀರ್ಣ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ವರ್ತಮಾನದ ಬದುಕಿನ ಸಮಸ್ಯೆ, ಬವಣೆಗಳನ್ನು ದಾಖಲಿಸುತ್ತವೆ.
ಪ್ರಸ್ತುತ ಈ ಕೃತಿಯಲ್ಲಿ ಚೆನ್ನವೀರ ಕಣವಿ, ಆನಂದ ಝಂಜರವಾಡ, ಲೀಲಾ ಕಲಕೋಟಿ, ಜಿ.ಎಸ್. ಅವಧಾನಿ, ಮಲ್ಲಿಕಾ ಘಂಟಿ, ವಾಮನ ಬೇಂದ್ರೆ, ಅಶೋಕ ಶೆಟ್ಟರ, ಮೋಹನ ನಾಗಮ್ಮನವರ, ವಿಷ್ಣು ನಾಯ್ಕ, ಎಂ.ಡಿ. ಗೋಗೇರಿ, ಹೇಮಾ ಪಟ್ಟಣಶೆಟ್ಟಿ, ಚಂದ್ರಶೇಖರ ವಸ್ತ್ರದ, ಶ್ರೀರಾಮ ಇಟ್ಟಣ್ಣನವರ, ಮಹಾದೇವ ಕಣವಿ, ಸತ್ಯಾನಂದ ಪಾತ್ರೋಟ, ಸುಕನ್ಯಾ ಮಾರುತಿ, ಎಚ್. ಡುಂಡಿರಾಜ ಅವರ ಆಯ್ದ ಕವಿತೆಗಳು ಈ ಸಂಕಲನದಲ್ಲಿವೆ.
ಕವಿ, ಕಥೆಗಾರ ಹಾಗೂ ಹೆಸರಾಂತ ಪ್ರಸಾರತಜ್ಞ ಡಾ. ಬಸವರಾಜ ಸಾದರ ಹುಟ್ಟಿದ್ದು 1955 ರ ಜುಲೈ 20 ರಂದು, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ. ಮೂಲತಃ ಕಲಘಟಗಿ ತಾಲೂಕಿನ ಹುಲ್ಲಂಬಿಯವರಾದ ಇವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಉನ್ನತ ಶ್ರೇಣ ಯಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ಎಂ. ಎ. ಪದವಿ ಪಡೆದಿದ್ದಾರೆ. ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ಎಂಬ ವಿಷಯ ಕುರಿತ ಅಧ್ಯಯನಕ್ಕೆ ಪಿಎಚ್.ಡಿ ಪದವಿ ಪಡೆದಿರುವ ಇವರು, ರ್ಯಾಂಕ್ ಹಾಗೂ ಮತ್ತೊಂದು ಚಿನ್ನದ ಪದಕದೊಂದಿಗೆ ಡಿಪ್ಲೋಮಾ-ಇನ್-ಬಸವ ಸ್ಟಡೀಜ್‍ನ್ನೂ ಪೂರೈಸಿದ್ದಾರೆ. 1984 ರಲ್ಲಿ ಕಾರ್ಯಕ್ರಮ ನಿರ್ವಾಹಕನೆಂದು ...
READ MORE