ಕಾಡು ಲಿಲ್ಲಿ ಹೂವುಗಳು

Author : ಸವಿತಾ ನಾಗಭೂಷಣ

Pages 272

₹ 150.00




Year of Publication: 2006
Published by: ರೂಪ ಪ್ರಕಾಶನ
Address: ಬಿ.21,ಮಲ್ಲಿಗೆ ರಸ್ತೆ, ಕುವೆಂಪುನಗರ, ಮೈಸೂರು- 570023

Synopsys

‘ಕಾಡು ಲಿಲ್ಲಿ ಹೂವುಗಳು’ ಸಾಹಿತಿ ಸವಿತಾ ನಾಗಭೂಷಣ ಅವರ ಕವನ ಸಂಕಲನ.  ಸವಿತಾ ಮೂಲತಃ ಲಯಗಳ ಹುಡುಕಾಟದ ಕವಿ. ಇದನ್ನು ಸಾಂಗತ್ಯದ ಹುಡುಕಾಟವೆಂದೂ ಕರೆಯಬಹುದು. ಈ ಲಯ, ಸಾಂಗತ್ಯವೆನ್ನುವುದು ಸಿದ್ಧ ಸ್ಥಿತಿಯಲ್ಲವಲ್ಲ. ಅದೊಂದು ಸಾಧಿಸಿಕೊಳ್ಳಬೇಕಾದ ಸಂದರ್ಭ ಮತ್ತು ಮನಃಸ್ಥಿತಿ ಎನ್ನುತ್ತಾರೆ ಲೇಖಕಿ ಡಾ. ಎಂ.ಎಸ್.ಆಶಾದೇವಿ. 

ಈ ತನಕ ಪ್ರಕಟವಾಗಿರುವ ಸವಿತಾ ಅವರ ನಾಲ್ಕೂ ಸಂಕಲನಗಳಲ್ಲಿ ಈ ಹುಡುಕಾಟವೆನ್ನುವುದು ಸ್ಥಾಯಿ ಎನ್ನುವಂತೆ, ನಿರಂತರವಾಗಿ ನಡೆದಿದೆ. ಪ್ರಕೃತಿ ಮನುಷ್ಯನ ನಡುವೆ ಸಾಧಿತವಾಗಬೇಕಿರುವ ಲಯ, ಸಂಬಂಧಗಳ ಬಿಕ್ಕಟ್ಟುಗಳ ನಡುವೆಯೇ ಕಟ್ಟಿಕೊಳ್ಳಬೇಕಾದ ಲಯ, ಬದುಕಿನ ಕನಸು- ವಾಸ್ತವಗಳ ನಡುವೆಯೇ ಕಟ್ಟಿಕೊಳ್ಳಬೇಕಾದ ಲಯ...ಈ ಎಲ್ಲವುಗಳನ್ನು ಇವರ ಕಾವ್ಯ ಹುಡುಕುತ್ತಲೇ....ಇದೆ.

ಹಾಗೆ ನೋಡಿದರೆ ಸವಿತಾರ ಕಾವ್ಯದ ಶೈಲಿಯಲ್ಲಿಯೂ ಈ ಹೊಸ ಲಯದ ಹುಡುಕಾಟವಿದೆ. ಅಭಿವ್ಯಕ್ತಿಯ ನಾಟಕೀಯ ಮಾದರಿಗಿಂತ ಸಾವಧಾನದ , ಸಂಯಮದ, ಕೆಲವೊಮ್ಮೆ ಸ್ವಗತದ ಲಯದಲ್ಲಿಯೂ ಈ ಕವಿ ನಂಬಿಕೆಯಿಟ್ಟಂತೆ ತೋರುತ್ತದೆ. ಕರುಳು ಕತ್ತರಿಸುವ ಅನುಭವದ ಘಳಿಗೆಗಳನ್ನಾಗಲಿ, ಬದುಕನ್ನು ಅರಳಿಸುವ ರೋಮಾಂಚನದ ಘಳಿಗೆಗಳನ್ನಾಗಲಿ, ಸವಿತಾ ಹಿಡಿಯುವುದು ಸಾವಧಾನದ ಸಂವಿಧಾನದಲ್ಲಿಯೇ !

About the Author

ಸವಿತಾ ನಾಗಭೂಷಣ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್‍ ...

READ MORE

Related Books