ಜ್ಞಾನ ಸೂರ್ಯ- ಕವಿ ಮಚ್ಛೇಂದ್ರ ಪಿ. ಅಣಕಲ್ ಅವರ ಸಂಪಾದಿತ ಕವನ ಸಂಕಲನ. ಡಾ.ಅಂಬೇಡ್ಕರ್ ಕುರಿತು ಮತ್ತು ದಲಿತ ಸಂವೇದನೆಯ ಕವಿತೆಗಳೊಂದಿಗೆ ನಾಡು- ನುಡಿ, ಪ್ರಕೃತಿ ವಿಕೊಪಕ್ಕೆ ಸಂಬಂಧಿಸಿದ ಹಲವಾರು ಕವಿತೆಗಳಿವೆ. 2001 ರಲ್ಲಿ ಡಾ.ಅಂಬೇಡ್ಕರ್ ಜಯಂತ್ಯುತ್ಸವ ನಿಮಿತ್ತ ಶರಣನಗರ (ಕಿಣ್ಣಿ) ಗ್ರಾಮದ ಜ್ಞಾನ ಸೂರ್ಯ ತರುಣ ಸಂಘವು ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಹಿರಿ-ಕಿರಿಯ ಕವಿಗಳ (ಒಟ್ಟು 104 ಕವಿತೆಗಳು) ಕವನಗಳನ್ನು ಆಯ್ಕೆ ಮಾಡಿ ಕೃತಿಯಲ್ಲಿ ಸಂಪಾದಿಸಲಾಗಿದೆ. ಸಾಹಿತಿ ಡಾ.ರಾಜೇಂದ್ರ ಯರನಾಳೆ ಅವರು ಕೃತಿಗೆ ಬೆನ್ಯನುಡಿ ಬರೆದು, ವಸ್ತು ವೈವಿಧ್ಯತೆಯ ಇಲ್ಲಿಯ ಕವನಗಳು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರತಿನಿಧಿಸುತ್ತವೆ ಎಂದು ಪ್ರಶಂಸಿಸಿದ್ದಾರೆ.
ಮಚ್ಚೇಂದ್ರ ಪಿ ಅಣಕಲ್ ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದಲ್ಲಿ 12-06-1979 ರಂದು ಜನಿಸಿದರು. ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರು. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಎಂ.ಇಡಿ ಪದವೀಧರರು. ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ 'ಲಾಟರಿ'ಕತೆ ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ ...
READ MORE