ಜೀಯಸೆಲೆ

Author : ಅಬ್ದುಲ್ ರಹಿಮಾನ್ ಕುತ್ತೆತ್ತೂರು

Pages 60

₹ 40.00




Published by: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ
Phone: 0824-2412297

Synopsys

ಜೀಯಸೆಲೆ ಕವನ ಸಂಕಲನದಲ್ಲಿ ಕ್ರಮವಾಗಿ ಕವನಗಳು, ಚುಟುಕುಗಳು ಮತ್ತು ಸರ್ವಜ್ಞನ ತ್ರಿಪದಿಗಳ ಅನುವಾದ ಎಂಬ ಮೂರು ವಿಭಾಗಗಳಿದ್ದು ಈ ಸಂಕಲನದ ನಂಡೋ ಕವನ, ನಂಡುಮ್ಮ, ಗುರ್ಬಿ ದಾದಡೊ ಕಿನಾವು ಮುಂತಾದವುಗಳು ಬಹಳಷ್ಟು ಗಮನ ಸೆಳೆಯುವ ಕವನಗಳು. ದುಡಿದು ದುಡಿದು ಹಣ್ಣಾದ ಹಿರಿಯ ಹೆಣ್ಣು ಜೀವದ ಚಿತ್ರಣ ನಂಡುಮ್ಮದಲ್ಲಿದೆ. ಈ ಕವನದಲ್ಲಿ ಕವಿ ಟಿಪಿಕಲ್ ಬ್ಯಾರಿ ಉಮ್ಮನನ್ನು ಸೊಗಸಾಗಿ ಕಟ್ಟಿದ್ದಾರೆ. ಇನ್ನೂ ವಿಶೇಷವೇನೆಂದರೆ ಇದರಲ್ಲಿ ಬ್ಯಾರಿಗಳ ಜನಪ್ರಿಯ ತಿನಿಸುಗಳು, ಆಭರಣಗಳ ಚಿತ್ರಣವೂ ಇದೆ. *ಗುರ್ಬಿ ದಾದಡೂ ಕಿಡಾವು' ಬಹು ಜನಪ್ರಿಯ ಬಾಲಕಥೆಯಾದ ಕಾಗಕ್ಕ ಗುಬ್ಬಕ್ಕನ ಕಥೆಯ ಬ್ಯಾರಿ ಕವನ ರೂಪ. ಬ್ಯಾರಿ ಅಜ್ಜಿಯಂದಿರು ಮೊಮ್ಮಕ್ಕಳಿಗೆ ಕಥೆ ಹೇಳುವಂತೆ ಕವಿ ಇಲ್ಲಿ ಅದನ್ನು ಸರಳವಾಗಿ ಕವನ ರೂಪದಲ್ಲಿ ಹೆಣೆದಿದ್ದಾರೆ. ಈ ಸಂಕಲನದ ಚುಟುಕುಗಳಲ್ಲಿ ನಂಬಿಕೆ, ನಾನ್ ಎಂದಾಕಟ್ಟ್ (ನಾನೇನು ಮಾಡಲಿ) ಮುಂತಾದವುಗಳು ಬಹುವಾಗಿ ಕಾಡುವ ಚುಟುಕುಗಳು. “ನಾನ್ ಎಂದಾಕಟ್ಟ್'ನಲ್ಲಿ ಉಳ್ಳವರ ಡಾಂಭಿಕ ಭಕ್ತಿಯನ್ನು ಕುಟುಕುವ ಶಕ್ತಿ ಈ ಚುಟುಕಕ್ಕಿದೆ.

About the Author

ಅಬ್ದುಲ್ ರಹಿಮಾನ್ ಕುತ್ತೆತ್ತೂರು

ಕವಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಅವರು ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದ್ದಾರೆ. ಅವರ ಜೀಯಸೆಲೆ ಬ್ಯಾರಿ ಭಾಷೆಯಲ್ಲಿ ಪ್ರಕಟವಾದ ಕವಿತೆಗಳ ಸಂಕಲನವಾಗಿದೆ. ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಹತ್ವದ ಯೋಜನೆಯಾಗಿರುವ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟಿನ ಸಹ ಸಂಪಾದಕರಾಗಿದ್ದಾರೆ. ...

READ MORE

Related Books