’ಜೀವನ ಜೋಕಾಲಿ’ ಶರೀಫಾಬಿ ಅವರ ಕವನ ಸಂಕಲನ .ಒಟ್ಟು ಮೂವತ್ತೈದು ಕವಿತೆಗಳಿವೆ. ಬದುಕಿನ ಧನ್ಯತೆಯ ಕ್ಷಣಗಳನ್ನು, ಜೀವನದ ಧನಾತ್ಮಕ ಅಂಶಗಳನ್ನು, ಸಮಾಜದ ಸುಸ್ಥಿರ ಬದುಕಿನ ಅಗತ್ಯಗಳನ್ನು, ಮಾನವತೆ ಲೋಪದಿಂದಾದ ಕ್ರೂರತೆಗಳನ್ನು ಕವಯತ್ರಿ ಹಿಡಿದಿಟ್ಟಿದ್ದಾರೆ. ಯಾವಾಗಲೂ ಮನುಷ್ಯ ಪರೋಪಕಾರಿಯಾಗಿರಬೇಕು, ಸಮಾಜಮುಖಿಯಾಗಿರಬೇಕು ಎಂಬುದೇ ಕವನಗಳ ಸ್ಥಾಯಿಭಾವವಾಗಿದೆ. 'ದೇವರಿಗೆ ಕಾಣುತ್ತಿಲ್ಲವೇ', ’ಬದುಕಲು ಬಿಡಿ’, ’ಸ್ವಾರ್ಥ ಮನವೇ’, ’ಅತಂತ್ರ ಬದುಕು’, ’ನಾವು ಬಹಿಷ್ಕೃತರು’ ಮುಂತಾದ ಕವನಗಳು ಸಂಕಲನದಲ್ಲಿವೆ.
ಶರೀಫಾಬಿ, ಬಿ.ಎ. ಬಿ.ಇಡಿ., ನಿವೃತ್ತ ಶಿಕ್ಷಕಿಯಾಗಿದ್ದಾರೆ. ಇವರು ಜನಿಸಿದ್ದು ೦೬-೦೮-೧೯೫೨, ಚಿತ್ರದುರ್ಗ ದಲ್ಲಿ. ಇವರ ತಂದೆ ರಸೂಲ್ ಸಾಬ್, ತಾಯಿ ಮಲೀಕಾಬಿ ಶರೀಫಾಬಿ. ಇವರ ಪ್ರಕಟಿತ ಕೃತಿಗಳು : ಮುಂಜಾವಿನ ಮಂಜು ಹನಿಗಳು (ಬಿಡಿ ಲೇಖನಗಳು) ೨೦೦೫, ಬೆಟ್ಟದ ಸಂಪಿಗೆ (ಕವನ ಸಂಕಲನ) ೨೦೦೯, ನೆಲದ ನಂಟು ಸಾಹಿತ್ಯಕಸಾಂಸ್ಕತಿಕ ಲೇಖನಗಳು ೨೦೦೯ ರಲ್ಲಿ ಪ್ರಕಟವಾಗಿದೆ. ಆಕಾಶವಾಣಿ ಚಿತ್ರದುರ್ಗ ಇವರಿಂದ ಬಹುಮಾನವನ್ನು ಸ್ವೀಕರಿಸಿದ್ದಾರೆ. ...
READ MORE