’ಜೀವ ಜೀವದ ಗೆಳತಿ’ ದೊಡ್ಡರಂಗೇಗೌಡರ ಕವನಸಂಕಲನವಾಗಿದೆ. ಕೃತಿಯ ಪರಿಚಯವನ್ನು ಮಾಡಿರುವ ಡಿ.ಎಸ್. ಶ್ರೀನಿವಾಸ್ ಪ್ರಸಾದ್ ಅವರು, `ಮನಸ್ಸುಗಳ ಹಾಯಾದ ವಿಶ್ರಾಂತ ಸ್ಥಿತಿಯಲ್ಲಿ ಪ್ರೇಮದ ಸಾನ್ನಿಧ್ಯ ಸಾಂಗತ್ಯವನ್ನು ಸುಸಂಬದ್ಧಗೊಳಿಸಿದ ಅಪರೂಪದ ಜಾಣ್ಮೆಇಲ್ಲಿದೆ. ಕವಿ ಹೀಗಾಗಿಯೇ ತುಂಟಾಟದಲ್ಲೂ ಪ್ರೀತಿಯ ಭಾವನೆಗಳನ್ನು ಪರಿಫ್ಲುತ ಗೊಳಿಸಬಲ್ಲರು. ತುಂಟತನದಲ್ಲೂ ಪ್ರೀತಿಯ ಸ್ವಾಭಾವಿಕತೆಯನ್ನು ಬಿಂಬಿಸುವ ಕಲೆ ದೊಡ್ಡರಂಗೇಗೌಡರಲ್ಲಿ ಹಾಸುಹೊಕ್ಕಾಗಿ ಪಡಿಮೂಡುತ್ತದೆ. ದೊಡ್ಡರಂಗೇಗೌಡರ ಪ್ರೀತಿಯ ಗೀತೆಗಳಲ್ಲಿ ಪ್ರಕೃತಿಯ ಸಮೀಕರಣವಿದೆ. ನಿಸರ್ಗದ ಒಡನಾಟವನ್ನು ಪ್ರೇಮಿಗಳ ಸಂತೋಷದ ಸಂಗಮಕ್ಕೆ ಸವಿಸಂಭ್ರಮದ ರಸಗಳಿಗೆ ಅನ್ವಯಿಸಿದ ಅವರ ವಿನ್ಯಾಸಕ್ರಮ ನಿಜಕ್ಕೂ ಮುದ ನೀಡುತ್ತದೆ. ಪ್ರೇಮಿಗಳ ಉಲ್ಲಸಿತವಾದ ಆನಂದವನ್ನು ಕವಿ ಭಿನ್ನ ವಿಭಿನ್ನ ಅವಸ್ಥಾಂತರಗಳಲ್ಲಿ ಚಿತ್ರಿಸಿರುವುದು ಗಮನಾರ್ಹವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ..
ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್.ಎಲ್.ಎನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...
READ MORE