‘ಜೇನ ಹನಿಗಳು’ ಲೇಖಕ ಡಾ. ಬಸವರಾಜ ಸಬರದ ಹನಿಗವಿತೆಗಳ ಸಂಕಲನ. ಈ ಕೃತಿಗೆ ಡಾ.ಸ್ವಾಮಿರಾವ ಕುಲಕರ್ಣಿ ಅವರು ಮುನ್ನುಡಿ ಬರೆದಿದ್ದಾರೆ. ಡಾ. ಸಬರದ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಅದ್ಭುತ ಎನ್ನುವ ಅವರು ಸಬರದ ಅವರ ನೂರೊಂದು ಹನಿಗವನಗಳ ಸಂಕಲನ ಜೇನ ಹನಿಗಳ ಕುರಿತು ನಾನು ಹೆಚ್ಚಿಗೆ ಹೇಳಲಾರೆ, ಹನಿಗಳು ನಿಮ್ಮ ಕೈಯಲ್ಲಿವೆ, ನೆಕ್ಕಿ ಬಾಯಿ ಚಪ್ಪರಿಸಿದರೆ ಸಾಕು, ಅರ್ಥಗರ್ಭಿತವಾದ, ಕಾವ್ಯಗುಣವನ್ನು ಹೊಂದಿರುವ ಈ ಹನಿಗಳನ್ನು ಮೇಲಿಂದ ಮೇಲೆ ಓದಬೇಕೆಂಬ ಬಯಕೆ ಹುಟ್ಟುವುದೇ ಈ ಹನಿಗವನಗಳ ಸಾರ್ಥಕದ ಗುಟ್ಟು. ಜೇನು ಹುಟ್ಟಿನಿಂದ ತೆಗೆದ ನೂರೊಂದು ಜೇನ ಹನಿಗಳ ಸವಿ ಮನಕ್ಕೆ ಮುದ ನೀಡುತ್ತದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನನ್ನವರ ಹಾಡು, ಹೋರಾಟ, ...
READ MORE