ಜಾಲಿಮರದ ಜೋಳಿಗೆಯಲ್ಲಿ- ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರ ಖಂಡಕಾವ್ಯ. ಇದು ಲಕ್ಷ್ಮೀನಾರಾಯಣಸ್ವಾಮಿ ಅವರ ನಾಲ್ಕನೇ ಕೃತಿ. ಇದೊಂದು ಖಂಡಕಾವ್ಯವೆಂದು ಅವರೇ ಹೇಳಿಕೊಂಡಿದ್ದಾರೆ. ಇದು ನಿಜವಾದ ಅಪ್ಪಟಕಾವ್ಯ ಎನ್ನುತ್ತಾರೆ ಡಾ.ಚಂದ್ರಶೇಖರ ಕಂಬಾರ. ಕಾವ್ಯದ ಕಸುಬನ್ನು ಬಲ್ಲ, ತನ್ನ ಸಂಕಲನದಲ್ಲಿ ತನ್ನದೇ ಆದ ಭಾಷೆ, ಲಯ, ಗತ್ತುಗಾರಿಕೆಗಳನ್ನು ರೂಢಿಸಿಕೊಂಡ ಮಹತ್ವಾಕಾಂಕ್ಷೆಯ ಕವಿಯ ಕಾವ್ಯಕೃತಿ ಇದು. ಮಾಗಿದ ಕವಿಯ ನಾಟಕೀಯ ಗುಣ ಮತ್ತು ಭಾವಗೀತಾತ್ಮಕ ಶೈಲಿಯನ್ನು ಆರಂಭದಲ್ಲೇ ಗ್ರಹಿಸಿ ಇವರು ರೂಢಿಸಿಕೊಂಡಿದ್ದಾರೆ.
ಲೇಖಕ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರು (1987) ಬೆಂಗಳೂರಿನವರು. ಬೆಂಗಳೂರು ವಿ.ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ, ಅದೇ ಕೇಂದ್ರದಲ್ಲಿ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕೃತಿಗಳು: ಗೆಳತಿ ಮತ್ತೊಮ್ಮೆ ಯೋಚಿಸು, ಮುಟ್ಟಿನ ನೆತ್ತರಲ್ಲಿ’, ಉರಿವ ಕೆಂಡದ ಸೆರಗು (ಕವನ ಸಂಕಲನಗಳು), ಜಾಲಿಮರದ ಜೋಳಿಗೆಯಲ್ಲಿ ಎಂಬ ಖಂಡಕಾವ್ಯ ಕೃತಿ, ಇವರ ‘ತೊಗಲ ಚೀಲದ ಕರ್ಣ’ ಕೃತಿಗೆ 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ.ತೊಗಲ ಚೀಲದ ಕರ್ಣ, ಸಾಣೆಗಲ್ಲು, ಬಹುಪರಾಕಿನ ಸಂತೆಯೊಳಗೆ (ವಿಮರ್ಶಾ ಕೃತಿ) ಡಾ. ಎಸ್ ಎನ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಕಿರು ಹೊತ್ತಿಗೆ ಪ್ರಕಟಿಸಿದ್ದಾರೆ. ಬೆಂಗಳೂರು ಸಾರಿಗೆ ಸಂಸ್ಥೆ ನೀಡುವ ...
READ MORE