ಜಾಡು ತಪ್ಪಿದ ನಡಿಗೆ ಕವನ ಸಂಕಲನವು ಕವಿಯ ಬದುಕು ಹಾಗೂ ವೃತ್ತಿಯ ಕುರಿತಾದ ಕವನಗಳ ಸಂಕಲನವಾಗಿದೆ. ವಿವಿಧ ಬಗೆಯ ವಸ್ತು ವಿಷಯಗಳ ಕವಿತೆಗಳು ಓದುಗರನ್ನು ಸೆಳೆಯುತ್ತವೆ. ಹಾವೇರಿಯಿಂದ ಕೊಪ್ಪಳದೆಡೆಗೆ ಬೆಳೆದ ಕವಿಯ ಬದುಕಿನ ವೃತ್ತಿಯ ಪಯಣದಲ್ಲಿನ ಅನುಭವಗಳು ಇಲ್ಲಿನ ಕವನಗಳ ದ್ರವ್ಯವಾಗಿವೆ. ಬಂದೂಕಿಗೆ ಗುಂಡು ಕ್ಷಮೆ ಕೇಳುವಂತೆ, ಅನ್ನ ಆತ್ಮಹತ್ಯೆ ಮಾಡಿಕೊಳ್ಳುವಂತ, ರೂಪಕಗಳು ಇದರಲ್ಲಿವೆ. ಈ ಕವನ ಸಂಕಲನದ ಕವಿತೆಗಳು ಓದಿಗಾಗಿ:
ನೀವು ನಂಬಲಿಕ್ಕಿಲ್ಲ
ನನ್ನನ್ನು ಬಂದೂಕಿಗೆ ತುಂಬುವಾಗ
ಅವರ ಕೈಗಳಲ್ಲಿ ನಡುಕ!
ಸತ್ಯದ ಭಯವಿತ್ತು
ನೆಲದವ್ವನ ಹಣೆಗೆ ಸೂರ್ಯ
ತಿಲಕವಿಡುವ ಹೊತ್ತಿನಲ್ಲಿ
ಸತ್ಯದ ಹಣೆ ಸೀಳಿ ಎದೆ ಹೊಕ್ಕಾಗ
ಸಿಡಿದ ಗುಂಡಿನ ಕಿಡಿಗಳ ನಡುವೆ
ಸತ್ಯ ನರಳುತ್ತದೆ ಮುತ್ತೈದೆಯಾಗಿ
ಸಿರಿಯಾದ ಬಾಲ ಕಲಾವಿದನೊಬ್ಬ
ಚಿತ್ರವೊಂದರ ತುಟಿಯಂಚಿನ ನಗುವಿಗೆ
ಸವರುತ್ತಾನೆ ರಕ್ತ
ಮುಗಿಯದೇ ಅರ್ಧಕ್ಕೆ ನಿಂತ
ತನ್ನ ತಾಯಿಯ ಚಿತ್ರವನ್ನು ಮುಗುಚಿ ಹಾಕುತ್ತಾ..
ಕವಿ, ಕಥೆಗಾರ ಸೋಮು ಕುದರಿಹಾಳ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಂದಾಪುರದವರು. ಕಳೆದ ಹನ್ನೆರಡು ವರ್ಷಗಳಿಂದ ಗಂಗಾವತಿಯ ಕುಂಟೋಜಿ ಲಕ್ಷ್ಮೀಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು. ಇವರಿಗೆ 2018ರ ತಾಲ್ಲೂಕು ’ಉತ್ತಮ ಶಿಕ್ಷಕ ಪ್ರಶಸ್ತಿ, ಗಂಗಾವತಿ ತಾಲ್ಲೂಕಕು ಕರವೇಯಿಂದ ಕನ್ನಡ ಶಿಖಾಮಣಿ ಪ್ರಶಸ್ತ’ಗಳೂ ಲಭಿಸಿವೆ. ಕೃತಿಗಳು: ಜಾಡು ತಪ್ಪಿದ ನಡಿಗೆ (ಕವನ ಸಂಕಲನ). ...
READ MORE