ಇಶ್ಖಿನ ಒರತೆಗಳು

Author : ಮುನವ್ವರ್ ಜೋಗಿಬೆಟ್ಟು

Pages 80

₹ 90.00




Year of Publication: 2018
Published by: ತಿಜೋರಿ ಪಬ್ಲಿಕೇಷನ್ಸ್
Address: ತಿಜೋರಿ ಪಬ್ಲಿಕೇಷನ್ ಬಳ್ಳಾರಿ
Phone: 9663710829

Synopsys

ಕವಿ ಮುನವ್ವರ್ ಜೋಗಿಬೆಟ್ಟು ಅವರ ಕವಿತೆಗಳ ಸಂಗ್ರಹ ಇಶ್ಖಿನ ಒರತೆಗಳು ಪ್ರೇಮದ ಮೂಲಾಧಾರದ ಕುರಿತು ಮಾತನಾಡುತ್ತವೆ. ಇಲ್ಲಿ ಪ್ರವಾದಿ ಪ್ರೇಮ, ಇಸ್ಲಾಮಿನ ಆಶಯ, ಹದೀಸುಗಳ ಅನುಕರಣೆ, ಪ್ರವಾದಿಚರ್ಯೆಗಳ ವಿವರಣೆ ಹೀಗೆ ಕವಿತೆಗಳು ಸುಂದರ ಉಪಮೆ ರೂಪಕಗಳೊಡನೆ ಬ್ಯಾರಿ ಮತ್ತು ಅರೆಬಿಕ್ ಪದಪುಂಜಗಳಿಂದ ಸಮೃದ್ಧವಾಗಿ ಮೂಡಿ ಬಂದಿವೆ. ಇವು ಕನ್ನಡ ಸಾಹಿತ್ಯಲೋಕಕ್ಕೆ ಒಂದು ಹೊಸ ಕೊಡುಗೆ. ಮುಸ್ಲೀಮೇತರರಿಗೆ ಪರಕೀಯವಾಗಿಯೇ ಉಳಿದ ಅದ್ಭುತ ಸಾಹಿತ್ಯ ಪ್ರಕಾರವೊಂದು ಕೇರಳ ಮತ್ತು ದಕ್ಷಿಣ ಕರ್ನಾಟಕದಲ್ಲಿದೆ. ಮಾಲಾಗಳೆಂಬ ಹೆಸರಿನಲ್ಲಿಯೇ ಆ ಕಾವ್ಯ ಪ್ರಕಾರಗಳು ಪ್ರಸಿದ್ಧವಾಗಿವೆ. ಮಕ್ದೂಮಿ ಸೂಫಿ ಪರಂಪರೆಯಿಂದ ಸಾಗಿ ಬಂದಿರುವ ಈ ಕಾವ್ಯ ಮಾಲಗಳು ಇಲ್ಲಿನ ಮುಸ್ಲೀಮರಲ್ಲಿ ಜನಜನಿತವಾಗಿದೆ. ಮುನವ್ವರ್ ಅವರ ಕವಿತೆಗಳು ಕನ್ನಡದ ಮಾಲಾಗಳಂತೆ ಗೋಚರಿಸುತ್ತವೆ. ಸಂಸ್ಕೃತಭೂಯಿಷ್ಠವಾದ ಕವಿತೆಗಳನ್ನು ವಿಶಾಲ ಮನೋಭಾವದಿಂದ ಸ್ವೀಕರಿಸಿದ ಸಹೃದಯರು, ಅರಬಿಕ್ ಮತ್ತು ಬ್ಯಾರಿ ಭಾಷೆಯ ಪದಪುಷ್ಪಗಳಿಂದ ಅಲಂಕೃತವಾದ ಈ ಕವಿತೆಗಳು ಎಲ್ಲರಿಗೂ ಇಷ್ಟ ಆಗುತ್ತವೆ. 

About the Author

ಮುನವ್ವರ್ ಜೋಗಿಬೆಟ್ಟು
(12 May 1994)

ಮುನವ್ವರ್ ಜೋಗಿಬೆಟ್ಟು ಅವರ ಊರು ಉಪ್ಪಿನಂಗಡಿ ಪಟ್ಟಣಕ್ಕೆ ಸಮೀಪವಿರುವ ಜೋಗಿಬೆಟ್ಟು. ಇಷ್ಟದ ಲೇಖಕ ತೇಜಸ್ವಿ ಮತ್ತು ಹಳ್ಳಿ ಸೊಗಡಿನಲ್ಲೇ  ಬೆಳೆದಿದ್ದರಿಂದ ಪ್ರಾಣಿ ಪ್ರಪಂಚ, ಪರಿಸರದ ಬಗ್ಗೆ ವಿಶೇಷ ಕಾಳಜಿಯೊಂದಿರುವ ಅವರು ಪ್ರಸ್ತುತ ಕೆಂಡ ಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ' ಪರಿಸರ ಕಥನ' ಅಂಕಣಗಳು ಬರೆಯುತ್ತಿದ್ದಾರೆ. ಮುನವ್ವರ್ ಅವರ  ' ಮೊಗ್ಗು' ಮತ್ತು ' ಇಶ್ಖಿನ ಒರತೆಗಳು' ಕವನ ಸಂಕಲನಗಳು ಪ್ರಕಟವಾಗಿವೆ. ಜೊತೆಗೆ ಅವರ ಹಲವು ಲೇಖನ, ಕಥೆ , ಕವಿತೆಗಳು ಪ್ರಜಾವಾಣಿ, ವಾರ್ತಾ ಭಾರತಿ, ವಿಶ್ವವಾಣಿ ಮತ್ತು ಇತರ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಸದ್ಯ ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ...

READ MORE

Related Books