ಇರುವುದೆಲ್ಲವ ಬಿಟ್ಟು

Author : ರವೀಂದ್ರ ಲುಕ್ಕ

Pages 90

₹ 100.00




Year of Publication: 2020
Published by: ಶರಧಿ ಪ್ರಕಾಶನ
Address: ಸಣ್ಣಕ್ಕಿಬೆಟ್ಟು ಹೌಸ್, ಪರ್ಕಳ ಅಂಚೆ ಉಡುಪಿ-576107

Synopsys

`ಇರುವುದೆಲ್ಲವ ಬಿಟ್ಟು’ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಕವನಸಂಕಲನ.  ಕವಿತೆಯೆನ್ನುವುದು ಕವಿಯ ವಿಶಿಷ್ಟ ಅನುಭವಗಳ ಅಭಿವ್ಯಕ್ತಿ. ಕವಿಯ ವೈಯಕ್ತಿಕ ಅನುಭವಗಳು ಅವನ ಲೋಕಾನುಭವದೊಂದಿಗೆ ಮುಖಾಮುಖಿಯಾದಾಗ ಈ ವಿಶಿಷ್ಟ ಅನುಭವ ರೂಪುಗೊಳ್ಳುತ್ತದೆ. ಅದಕ್ಕೆ, ಕವಿಯು ಭಾಷೆಯ ವಿಶಿಷ್ಟ ಪೋಷಾಕನ್ನು ತೊಡಿಸುತ್ತಾನೆ. ಭಾಷೆಯ ಹಿಡಿತಕ್ಕೆ ಸುಲಭವಾಗಿ ದಕ್ಕದ ಈ ವಿಶಿಷ್ಟ ಅನುಭವವು, ಕವಿಕರ್ಮದ ಕಾಯಕದಲ್ಲಿ ಪದಗಳ ನಡುವಿನ, ಸಾಲುಗಳ ನಡುವಿನ ಮೌನದಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಅದು, ಕಾಣುವುದರ ಮೂಲಕ ಕಾಣದ್ದನ್ನು ಹಿಡಿಯುವ ಕಾಯಕವೆನ್ನಬಹುದು. ಅಥವಾ, ಅದು ಇಲ್ಲಿನ "ಅದು ಹೇಗೆ?" ಕವಿತೆಯಲ್ಲಿ ಹೇಳಿದಂತೆ, "ಪರಿಮಳವನ್ನಷ್ಟೇ ಹೊತ್ತು ತಂದ ಗಾಳಿಯಲ್ಲಿ ಹೂವನ್ನು ಹುಡುಕುವ ಕಾಯಕ’’ ಈ ಕವನದ ಸಾಲುಗಳ ಮುಖೇನ ಪರಿಮಳದ ಬೆನ್ನು ಬಿದ್ದು, ಕಾಣದ ಹೂವನ್ನು ಹುಡುಕುವ ಕೆಲಸದಲ್ಲಿ ರವೀಂದ್ರರು ತಕ್ಕ ಮಟ್ಟಿಗೆ ಸಫಲರಾಗಿದ್ದಾರೆಂದೇ ಹೇಳಬ‌ಹುದು' ಎಂದಿದ್ದಾರೆ.

64 ಪುಟ್ಟ ಪುಟ್ಟ ಕವಿತೆಗಳ ಗುಚ್ಛವಿದು. ಪ್ರೀತಿ ಪ್ರೇಮ-ಕಾಮ ವಿರಕ್ತಿ ಏಕಾಂತ, ಒಂಟಿತನ, ಹತಾಶೆ, ಆಧ್ಯಾತ್ಮದ ಕಡೆಗಿನ ಒಲವುಗಳಂಥ ಬದುಕಿನ ಹಲವು ರೀತಿಯ ನೋವು ನಲಿವು ಆಕಾಂಕ್ಷೆಗಳಿಗೆ ಈ ಕವನಗಳು ಸ್ಪಂದಿಸುತ್ತವೆ. ಅಸ್ಮಿತೆಯ ಹುಡುಕಾಟ ಮತ್ತು ಅಸ್ತಿತ್ವದ ಕುರಿತಾದ ಜಿಜ್ಞಾಸೆಗಳೇ ಇಲ್ಲಿನ ಹೆಚ್ಚಿನ ಕವಿತೆಗಳ ಅಂತರ್ಧಾರೆ. ಪ್ರೀತಿ ಪ್ರೇಮಗಳಿಂದ ಸಿಗುವ ಸುಖದ ಮೋಹ ಒಮ್ಮೆ ಮನಸ್ಸಿಗೆ ಆಕರ್ಷಣೀಯಾವಾಗಿ ಕಾಣಿಸಿದರೆ, ಅವುಗಳ ಹಿಂದಿನಿಂದಲೇ ಹೆಡೆಯೆತ್ತುವ ಕಾಮದ ಕಾಳಿಂಗ ಸರ್ಪದ ಬುಸುಗುಟ್ಟುವಿಕೆಯು ಬದುಕಿನ ಭವದ ಪರಿಧಿಯಾಚೆಗಿನ ಬಯಲನ್ನು ಬಯಸುತ್ತದೆ. ಹೀಗೆ ಈ ಕವನಗಳು ದ್ವಂದ್ವದ ಇಕ್ಕಟ್ಟಿನಲ್ಲಿ ಸಿಲುಕಿ ಬೇಯುವ ವ್ಯಕ್ತಿಯ ಅಸಹಾಯಕತೆಯ ಅರಣ್ಯ ರೋದನದ ಅಭಿವ್ಯಕ್ತಿಯಾಗಿದೆ. ಇಲ್ಲಿನ ಕವನಗಳಲ್ಲಿ ಹಿರಿಯ ಕವಿಗಳ ಸಾಲುಗಳು ಕೂಡ ಇವೆ. ಈ ಕವನದ ಶೀರ್ಷಿಕೆ ‘ಇರುವುದೆಲ್ಲವ ಬಿಟ್ಟು’ ಎಂಬ ಶೀರ್ಷಿಕೆಯೇ ಅಡಿಗರ ಆಧ್ಯಾತ್ಮ ಚಿಂತನೆಯ ಕವನ ‘ಯಾವ ಮೋಹನ ಮುರಲಿ..’ ಯಲ್ಲಿ ಬರುವ ಸಾಲು ಇದು. 

About the Author

ರವೀಂದ್ರ ಲುಕ್ಕ
(31 July 1985)

ಲೇಖಕ ರವೀಂದ್ಬಾರ ಲುಕ್ಕ ಅವರು ಮೂಲತಃ (ಜನನ: 31-07-1985) ಬಾಗಲಕೋಟೆಯವರು. ಎಂ.ಎ, ಬಿ.ಇಡಿ. ಪದವೀಧರರು. ಸದ್ಯ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಅಕ್ಕ ಮಹಾದೇವಿ ಮಹಿಳಾ ವಿ.ವಿ. ಪ್ರಥಮ ದರ್ಜೆ ಮಹಿಳಾ ಕಾಲೇಜ್ ಅತಿಥಿ ಉಪನ್ಯಾಸಕರು.  ಕೃತಿಗಳು: ಕರ್ನಾಟಕ ಟಿಇಟಿ ಪರೀಕ್ಞಾ ಕೈಪಿಡಿ, ಮೌಲಾನಾ ಆಜಾದ್ ಮುಖ್ಯೋಪಾಧ್ಯಾಯರ ಪರೀಕ್ಞಾ ಕೈಪಿಡಿ, ಸಾಮಾನ್ಯ ಕನ್ನಡ ಪ್ರಶ್ನೋತ್ತರ ಕೈಪಿಡಿ,    ...

READ MORE

Related Books