'ಇರುವ ಸಂಗತಿ' ಆರ್. ವಿಜಯರಾಘವನ್ ಅವರ ಕವನ ಸಂಕಲನ. ಆಡುಮಾತಿಗೆ ಅತ್ಯಂತ ಸಮೀಪವಿರುವ ಈ ಕವನ ಸಂಕಲನದಲ್ಲಿ ಒಂದು ನೆಲೆಯಿಂದ ಎಲ್ಲ ದಿಕ್ಕುಗಳಿಗೂ ವಿಸ್ತರಿಸಿದ ಅಗಾಧ ಸಮಸ್ಯೆಗಳ ಚಿತ್ರಣವಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನ ಹಳ್ಳಿಯವರಾದ ಆರ್. ವಿಜಯರಾಘವನ್ (1956) ಅವರು ಕವಿ. 5 ಕವನ ಸಂಕಲನ, 2 ಕತಾ ಸಂಕಲನ, 3 ಕಾದಂಬರಿ ಮತ್ತು ಹಲವು ಬಿಡಿ ಪ್ರಬಂಧಗಳಿಂದ ಚಿರಪರಿಚಿತರಾಗಿರುವಷ್ಟೇ, ಗುನ್ನಾರ್ ಏಕಲೋ, ರಿಲ್ಕ್, ಖಲೀಲ್ ಗಿಬ್ರಾನ್, ನಜೀಂ ಹಿಕ್ಮತ್, ವಾಸ್ಕೊ ಪೋಪ, ಲೋರ್ಕ, ದಾವ್ ದಿ ಜಿಂಗ್, ಮಹಾಪರಿನಿಬ್ಬಾನ ಸುತ್ತ, ಸಾಂಗ್ ಆಫ್ ಸಾಲೋಮನ್ ಮೊದಲಾದವರ ಸಾಹಿತ್ಯವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದು ಪ್ರಸಿದ್ದರು. ಅವರು ಈಗಾಗಲೇ 23 ಕೃತಿಗಳನ್ನು ಅವರು ಪ್ರಕಟಿಸಿದ್ದು, ಮ್ಯೂಸ್ ಇಂಡಿಯಾ, ಅವಧಿ, ಕೆಂಡ ಸಂಪಿಗೆ, ಸಂಪದ, ಸಂವಾದ ಮುಂತಾದ ಇ-ಮ್ಯಾಗಝಿನ್‌ಗಳಲ್ಲಿ ...
READ MORE