ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಕೃತಿ-ಇನ್ನಷ್ಟು ಹೇಳದೆ ಉಳಿದದ್ದು. ಕವಿಗಳು ಭಾಷಣ, ಪ್ರವಚನ, ಲೇಖನ ಮಾತ್ರವಲ್ಲ ಕವನಗಳನ್ನೂ ಸಹ ರಚಿಸಿದ್ದು, ವಿಷಯ ವಸ್ತುವಿನ ದೃಷ್ಟಿಯಿಂಧ, ನಿರೂಪಣಾ ಶೈಲಿಯಿಂದ ಸಾಮಾಜಿಕ ಹೊಣೆಗಾರಿಕೆ ಎಚ್ಚರಿಕೆಯಿಂದಲೂ ಓದುಗರ ಗಮನ ಸೆಳೆಯುತ್ತವೆ. ಬಹುತೇಕ ಕವನಗಳ ವಸ್ತು ಪುರಾಣ, ಭಾರತದಿಂದ ಆಯ್ಕೆ ಮಾಡಿಕೊಂಡಿದ್ದು, ಅವುಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಪರಿ ಅನನ್ಯ.
ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ 1936 ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ , ಶಿವಸೂಕ್ತ, ...
READ MORE