ಇದ್ದಟ ಬೆಳಕಿನ್ಯಾಗ..

Author : ಸುಶೀಲೇಂದ್ರ ಕುಂದರಗಿ

Pages 88

₹ 120.00




Year of Publication: 2022
Published by: ಸಾಂಖ್ಯಾಯನ ಪ್ರಕಾಶನ ಹುಬ್ಬಳ್ಳಿ
Address: HNO 2058, B12, 5th cross, Behind vijaya hotel, Chandranath Nagar, HUBBALLI. 580032
Phone: 09844828737

Synopsys

"ಇದ್ದಟ ಬೆಳಕಿನ್ಯಾಗ.." ಸುಶೀಲೇಂದ್ರ ಕುಂದರಗಿ ಅವರ ಕವನ ಸಂಕಲನವಾಗಿದೆ. ಉನ್ನತ ಮಟ್ಟದ ಭಾಷ್ಯಾ ಪ್ರೌಡಿಮೇ, ಕಠಿಣತೆ, ಮೌಲ್ಯವಿತ ಜ್ಞಾನ, ಕವಿತೆಗಳಿಗೆ ರಸ ಋಷಿತ್ವವನ್ನು ನೀಡಿದೆ. ಕವಿತೆಗಳನ್ನು ಬಿಡಿ ಬಿಡಿಯಾಗಿ ಬಿಡಿಸಿಕೊಂಡು ಅರ್ಥೈಸಿಕೊಂಡು ಭಾವನಾತ್ಮಕವಾಗಿ ಓದುತ್ತಾ ಬಂದರೆ ಓದುಗರ ಹೃದಯ ಕೋಟೆ ಸೆಳೆಯುವ ಮತ್ತು ಕ್ರಾಂತಿ ಬೆಳಕನ್ನು ಜಗದ ಮೇಲೆ ಚಲ್ಲಿ ಬದಲಿಸುವ ಅಸ್ತ್ರಗಳಾಗಿವೆ. ಅಗಾದವಾದ ಆಳ ಭಾಷೆಯನ್ನು ಹೊಂದಿದ್ದು ಅರ್ಥಗರ್ಭಿತವಾದ 64 ಕವಿತೆಗಳನ್ನು ಹೊಂದಿದ್ದು ಮಧ್ಯ ಮಧ್ಯ ಮಿಣುಕು ದೀಪಗಳು ಕಿಡಿ ಜ್ಞಾನದ ನುಡಿಗಳಾಗಿವೆ. ಎಲ್ಲಾ ಕವಿತೆಗಳು ಒಂದೊಂದು ವಿಷಯದ ಮೇಲೆ ಪ್ರಭಾವ ಬೀರಿ ಸಮಾಜದಲ್ಲಿ ಚಿಂತನೆ, ವಿಮರ್ಶೆ, ಅವಲೋಕನಕ್ಕೆ ಮತ್ತು ಬದಲಾವಣೆಗೆ ದಾರಿ ಮಾಡಿಕೊಡುತ್ತಿವೆ. ಆದ್ದರಿಂದ ಸುಶೀಲೇಂದ್ರ ಕುಂದರಗಿರವರ ರಚನೆಯ " ಇದ್ದಟ ಬೆಳಕಿನ್ಯಾಗ " ಕವಿತಾ ಸಂಕಲನ ರಸ ಸಾಹಿತ್ಯವಾಗಿದೆ. ದೇವರಾಟ, ನಿರಾಕಾರ, ಪಾಂಡುರಂಗ, ತಲೆ ತೆಳಗಾದ ಬುದ್ಧ, ವ್ಯಾರ್ಘ ಇನ್ನೂ ಮುಂತಾದ ಕವಿತೆಗಳು ವಾಸ್ತವಿಕ ಸಮಾಜದ ಹತ್ತು ಮುಖಗಳಲ್ಲಿ ಗೋಚರಿಸುತ್ತಿವೆ. ಆಧ್ಯಾತ್ಮ, ಚಿಂತನೆ, ತರ್ಕ, ಕಪಟತನ, ಆಚಾರ ವಿಚಾರ ಇತ್ಯಾದಿ ಅಂಶಗಳನ್ನು ನಾವು ಎಳೆ ಎಳೆಯಾಗಿ ಕಾಣಬಹುದು. ಪ್ರತಿ ಕವನಗಳಲ್ಲಿ ಕವಿಯ ಮನೋಜ್ಞಭಾವನೆಯ ಅಡಕವಾದ ಮುಖವಾಡವಾಗಿವೆ. ಇವು ಒಂದೊಂದು ವೇದಿಕೆಯಲ್ಲಿ ಒಂದೊಂದು ಕತ್ತಲ ಮೇಲೆ ಇದ್ದ ಬೆಳಕಲ್ಲೆ ಪ್ರಕಾಶಿಸುತ್ತಿವೆ. ಪ್ರತಿ ಕವನಗಳ ಜೊತೆಗೆ ರೇಖಾ ಚಿತ್ರಗಳು ಕವನದ ಆಶಯಗಳನ್ನು ವಿಭಿನ್ನವಾಗಿ ತೋರಪಡಿಸುತ್ತಿವೆ. ಕವನಗಳು ಮತ್ತು ಚಿತ್ರಪಟ ಓದುಗಾರರಿಗೆ ಚಿಂತನೆ ಹಚ್ಚುವದರ ಜೊತೆ ಜೊತೆಗೆ ಕವಿತೆಯ ಒಡಲಾಳಕ್ಕೆ ಕರೆದೋಯ್ಯುತ್ತಿವೆ. 

 

About the Author

ಸುಶೀಲೇಂದ್ರ ಕುಂದರಗಿ

ಕವಿ ಸುಶೀಲೇಂದ್ರ ಕುಂದರಗಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದವರು. ಅಭಿನಯ, ರಂಗನಿರ್ದೇಶನ, ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಪ್ರಸ್ತುತ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: ಮದ್ಯಾರಾಧನೆ (ಅಮಲು ಪದ್ಯಗಳು) ...

READ MORE

Related Books