ಹೂರಣ-ಅನಿಶ್ಬಾ ಬಿ.ಕೊಪ್ಲಪ ಅವರ ಕವನ ಸಂಕಲನ. ಒಟ್ಟು 50 ಕವನಗಳಿದ್ದು ಹಿರಿಯ ಸಾಹಿತಿ ಬೊಳುವಾರು ಮಹಮದ್ ಕುಂಞ ಬೆನ್ನುಡಿ ಬರೆದಿದ್ದಾರೆ. ಕವನವು ಹೊರ ಹೊಮ್ಮಿಸುವ ಭಾವನೆಗಳಿಗೆ ಪೂರಕವಾದ ಶೀರ್ಷಿಕೆಗಳಿವೆ. 'ಮಳೆ', 'ಮಳೆ - ಮಳೆ' , 'ವರ್ಷಧಾರೆ' , 'ಮುನಿಸೇತಕೆ' ಈ ಕವನಗಳು ಮಲೆನಾಡಿನ ಮಳೆಯ ಸೊಬಗು ಮತ್ತು ಮಳೆಯಿಂದಾಗುವ ಅನಾಹುತಗಳನ್ನು ಸಾದರಪಡಿಸುತ್ತವೆ.
ಅನೀಶ್ ಬಿ. ಕೊಪ್ಪ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಹುಟ್ಟಿದ್ದು 2005 ಡಿಸೆಂಬರ್ 22 ರಂದು ಕೊಪ್ಪದಲ್ಲಿ. ಶಿವಮೊಗ್ಗದ ಸೃಜನ ಟ್ರಸ್ಟ್ ನಡೆಸಿದ ರಾಜ್ಯ ಮಟ್ಟದ ಮಕ್ಕಳ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕುಪ್ಪಳಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದ ಕವನ ವಿಭಾಗದಲ್ಲಿ ಸ್ವರಚಿತ ಕವನಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹೂರಣ-ಎಂಬುದು ಅವರ ಮೊದಲ ಕವನ ಸಂಕಲನ. 2018 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕ್ಷೇತ್ರದ ಅಸಾಧಾರಣ ಪ್ರತಿಭೆ ಪುರಸ್ಕಾರ, 2018ರಲ್ಲಿ ವಿಜಯ ...
READ MORE