ಚಿಂತಕ ಪಾವೆಂ ಆಚಾರ್ಯರು ಬರೆದ ಕವನಗಳ ಸಂಗ್ರಹವಿದು. ಎಸ್.ಎಲ್. ಶ್ರೀನಿವಾಸ ಮೂರ್ತಿ ಸಂಪಾದಕರು ಹಾಗೂ ಶ್ರೀನಿವಾಸ ಹಾವನೂರು ಪ್ರಧಾನ ಸಂಪಾದಕರು. 1952 ರಲ್ಲಿ‘ ನವನೀರದ’ ಹಾಗೂ 1978ರಲ್ಲಿ ‘ಕೆಲವು ಪದ್ಯಗಳು ’ ಹೀಗೆ ಎರಡು ಕವನ ಸಂಗ್ರಹಗಳು ಪ್ರಕಟವಾಗಿದ್ದವು. ಮಂಕುತಿಮ್ಮನ ಕಗ್ಗದ ಮಾದರಿಯಲ್ಲಿ ಪೆಂಗೋಪದೇಶವನ್ನೂ ಪ್ರಕಟಿಸಿದ್ದರು. ಕವನಗಳನ್ನು ಬರೆಯುತ್ತಿದ್ದರಾದರೂ ಪಾವೆಂ ಅವರು ಪ್ರಸಿದ್ಧಿಗೆ ಬಂದಿದ್ದು ಕಸ್ತೂರಿ ಮಾಸ ಪತ್ರಿಕೆಯ ಸಂಪಾದಕರಾಗಿ.
‘ಕವಿಯೊಬ್ಬಕವಿತೆಯನು ಗಾಜಿನಲಿ ಬರೆದ, ಕೈ ತಪ್ಪಿ ಕೆಳೆಗೆ ಬಗೆದ, ಕೈಗೆ ಬಂದಂತೆ ಚೂರುಗಳ ಜೋಡಿಸಿದ, ನವ್ಯ ಕಾವ್ಯ ಇದೆಂದು ಕರೆದ.... ಹೀಗೆ ನವ್ಯಕವಿಗಳನ್ನು ಗೇಲಿ ಮಾಡಿದ ಇವರ ಪದ್ಯ ಬಹು ಚರ್ಚಿತವಾಗಿತ್ತು. ಪಿ.ಲಂಕೇಶ ಅವರು ಸಹ ತಮ್ಮ ಅಕ್ಷರ ಹೊಸ ಕಾವ್ಯದ ವಿಶ್ಲೇಷಣಾ ಕೃತಿಯಲ್ಲಿ ಪಾವೆಂ. ಆಚಾರ್ಯರ ಕವಿತ್ವವನ್ನು ಗುರುತಿಸಿದ್ದಾರೆ. ಈ ಸಂಕಲನದಲ್ಲಿ ಒಟ್ಟು 76 ಕವನಗಳಿವೆ. ಪೆಂಗೋಪದೇಶವೂ ಇದೆ. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಬರೆದ ಅಭಿಮತ ಲೇಖನವನ್ನು ಸಹ ಸಂಕಲಿಸಲಾಗಿದೆ.
ಡಾ, ಎಸ್.ಎಲ್ ಶ್ರಿನಿವಾಸಮೂರ್ತಿ ಅವರು ವಿಜಯ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು. ಸಸ್ಯ ಅಂಗಾಂಶ ಕೃಷಿ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಜಮಿನ್ ಲೂಯಿರೈಸ್ ರವರ ಜೀವನ ಮತ್ತು ಸಾಧನೆಯನ್ನು ಕುರಿತಂತೆ ರಚಿಸಿದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಪಡೆದಿದ್ಧಾರೆ. ಪಾ.ವೆಂ. ಆಚಾರ್‍ಯರ ಸಮಗ್ರ ಬರಹಗಳ ಹಲವು ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿ ಸಂಪಾದನೆ, ಪುಸ್ತಕ ಸಂಪಾದನೆ , ಪುಸ್ತಕ ವಿಮರ್ಶೆ, ಕಾರ್ಯದಲ್ಲಿ ತಮ್ನನ್ನು ತೊಡಗಿಸಿಕೊಂಡಿದ್ದಾರೆ. ...
READ MORE