ಈ ಕೃತಿಯಲ್ಲಿ ಭಾವಗೀತೆ, ಭಕ್ತಿಗೀತೆ, ನಾಡಗೀತೆ, ಲಹರಿ, ಚಿಣ್ಣರ ಅಂಗಳ, ಮಹಿಳಾ ಸಾಹಿತ್ಯ, ಹನಿಗವನಗಳು, ಶಿಶುಪ್ರಾಸಗಳು ಹೀಗೆ ವಿಭಾಗಗಳ ಕವನ ಸಂಕಲನವಿದು. ಕವಯಿತ್ರಿ-ಕಲ್ಪನಾ ಶಂಕರಭಟ್ಟ (ಕಲ್ಪನಾ ಅರುಣ್). ಕವನದಲ್ಲಿಯ ವಿಷಯ ವೈವಿಧ್ಯತೆ, ಗೇಯತೆ ಮತ್ತು ಪ್ರಾಸಬದ್ದ ಶೈಲಿ ಓದುಗರ ಗಮನವನ್ನು ಸೆಳೆಯುತ್ತದೆ.
ಕಲ್ಪನಾ ಶಂಕರ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದಲ್ಲಿ 1969 ಏಪ್ರಿಲ್ 24ರಲ್ಲಿ ಜನಿಸಿದರು. ತಂದೆ ಶಂಕರ ಭಟ್ಟ, ತಾಯಿ ಗಿರಿಜಾ ಭಟ್ಟ. ಬಿ.ಎ ಪದವಿ ಹಾಗೂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಕಳೆದ 25ವರ್ಷಗಳಿಂದ ಬರಹಗಳನ್ನು ರಚಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನ ನಿವಾಸಿ. ಇವರ ಕಾವ್ಯನಾಮ ಕಲ್ಪನಾ ಅರುಣ. ಹವ್ಯಕ ಭಾಷೆಯಲ್ಲೂ ಪರಿಣಿತಿ ಹೊಂದಿರುವ ಅವರು ಕತೆ, ಕವಿತೆ ರಚಿಸುವುದ ಹವ್ಯಾಸ. ಗ್ಲೊಬಲ್ ಪೀಸ್ ಯುನಿವರ್ಸಿಟಿಯು ಅವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಗೌರವ ಡಾಕ್ಟರೆಟ್ ನೀಡಿ ಗೌರವಿಸಿದೆ. ಅನೇಕ ...
READ MORE