ಹೂದೋಟದಲ್ಲಿ ದುರ್ದೈವಿ ಸಂಗ

Author : ಸಂಗಪ್ಪ ನಾಗಲಾಪುರ

Pages 144

₹ 120.00




Year of Publication: 2023
Published by: ಅಡ್ಲಿಗಿ ಪ್ರಕಾಶನ, ಮಸ್ಕಿ
Address: ಕಾವ್ಯ ಕೋಡಗುಂಟಿ, ಪ್ರಕಾಶಕರು, ಅಡ್ಲಿಗಿ ಪ್ರಕಾಶನ, ಮಸ್ಕಿ-584124, ಜಿ. ರಾಯಚೂರು
Phone: 9886407011

Synopsys

‘ಹೂದೋಟದಲ್ಲಿ ದುರ್ದೈವಿ ಸಂಗ’ ಕವಿ ಸಂಗಪ್ಪ ನಾಗಲಾಪುರ ಅವರ ಕವನ ಸಂಕಲನ. ಈ ಪುಸ್ತಕದ ವಿಶೇಷತೆ ಎಂದರೆ ಸುಮಾರು 50ವರ್ಷಗಳ ಹಿಂದೆ ಬರೆದ ಕವನಗಳನ್ನು ಮಸ್ಕಿಯ ಅಡ್ಲಿಗಿ ಪ್ರಕಾಶನ 2023ರಲ್ಲಿ ಪ್ರಕಟಿಸಿದೆ. ಈ ಸಂಕಲನದ ಕುರಿತು ಬರೆದಿರುವ ಬಸಯ್ಯ ಸ್ವಾಮಿ ಕಮಲದಿನ್ನಿ ಅವರು ಈ ಕವನ ಸಂಕಲನದಲ್ಲಿ 72 ಕವಿತೆಗಳಿವೆ. ಚಿಕ್ಕ ಚಿಕ್ಕ ಕವಿತೆಗಳು ಹಿಡಿದು ದೀರ್ಘ ಕವಿತೆಗಳು ಇವೆ.

ಕವಿ ಸಂಗಪ್ಪ ನಾಗಲಪುರ ಅವರು ತಮ್ಮ ಯವ್ವನ ಕಾಲದಲ್ಲಿ ಬರೆದ ಕವಿತೆಗಳು. ಕವಿ ನಾಗಲಾಪುರ ಅವರ ಬದುಕಿನ ಸಿಹಿ ಕಹಿ ದುಃಖ ನೋವು ನಿರಾಸೆ ಪ್ರೇಮ ಸರಸ ವಿರಸ ವಿರಹ ಈ ರೀತಿಯ ಅನೇಕ ಮನೋಭಿತ್ತಿಯ ಸಂಗತಿಗಳನ್ನ ಅವರ ಕವಿ ಮನಸ್ಸು ಕಾವ್ಯದಲ್ಲಿ ಬೆಳದಿಂಗಳಂತೆ ಚೆಲ್ಲಿದೆ ಎಂದಿದ್ದಾರೆ.

About the Author

ಸಂಗಪ್ಪ ನಾಗಲಾಪುರ
(02 January 1947)

ಸಂಗಪ್ಪ ನಾಗಲಾಪುರ ಅವರು ನಾಗಲಾಪುರ ಮನೆತನದ ಷಡಕ್ಷರಪ್ಪ ಮತ್ತು ಈರಮ್ಮ ಇವರ ಎಂಟು ಮಂದಿ ಮಕ್ಕಳಲ್ಲಿ ಐದನೆಯವರಾಗಿ ಹುಟ್ಟಿದರು. ಇವರಲ್ಲಿ ಐದು ಮಂದಿ ಗಂಡುಮಕ್ಕಳು ಮತ್ತು ಮೂವರು ಹೆಣ್ಣಮಕ್ಕಳು. ಸಂಗಪ್ಪ ನಾಗಲಾಪುರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಮುದಗಲ್ಲು ನಗರದ ಹಳೆಪೇಟೆಯಲ್ಲಿ ತಾರೀಕು ಜನವರಿ 2,1947ರಂದು. ಅವರು ತಮ್ಮ ತಂದೆಯವರನ್ನು ಅವರ 13ನೆ ವಯಸ್ಸಿನಲ್ಲಿ ಕಳೆದುಕೊಂಡರು. ಹತ್ತನೆ ತರಗತಿವರೆಗೆ ಶಿಕ್ಷಣವನ್ನು ನಡೆಸಿ ಎಸ್.ಎಸ್.ಎಲ್.ಸಿ. ಪಾಸಾದರು. ಆನಂತರ ಕೆಲಕಾಲ ಅವರ ಸಹೋದರನ ಜೊತೆ ಸಂತೆಯಲ್ಲಿ ಕಾಳು-ಕಡಿ ಮಾರುತ್ತಿದ್ದರು. ಬೆಂಗಳೂರಿಗೆ ಹೋಗಿ ಹೋಟೆಲಿನಲ್ಲಿ ಕೆಲಕಾಲ ಕೆಲಸ ಮಾಡಿದರು. ಬೆಂಗಳೂರಿನಿಂದ ಗೋವಾಕ್ಕೆ ...

READ MORE

Related Books