ಹೆಣ್ಣಾಗದ ಭ್ರೂಣಗಳು

Author : ಗಿರೀಶ ಜಕಾಪುರೆ

Pages 84

₹ 120.00




Year of Publication: 2015
Published by: ಪೂರ್ವಶ್ರೀ ಪ್ರಕಾಶನ
Address: 1765, ಶಾರದಾ ನಿವಾಸ, ಪೋ: ಮೈಂದರ್ಗಿ, ಜಿ : ಸೊಲ್ಲಾಪುರ
Phone: 8999906965

Synopsys

ಮುಕ್ತಛಂದದ 32 ಕವಿತೆಗಳುಳ್ಳ ಈ ಕೃತಿಯ ಕೇಂದ್ರವಸ್ತು ಸ್ತ್ರೀಸಂವೇದನೆ. ಇಲ್ಲಿನ ಬಹುಪಾಲು ಕವನಗಳು ಸ್ತ್ರೀಸಂವೇದನೆಯನ್ನು ವ್ಯಕ್ತಪಡಿಸುತ್ತವೆ. ಸಂಕನಲದ ಶೀರ್ಷಿಕೆಯಲ್ಲಿಯೇ ಹೆಣ್ಣು ಮತ್ತು ಭ್ರೂಣಗಳ ಉಲ್ಲೇಖವಿದೆ. ಇಂದಿನ ದಿನಮಾನಗಳಲ್ಲಿ ಹೆಣ ನ ಸ್ಥಿತಿಗತಿ, ಸಾಮಾಜಿಕ ಸ್ಥಾನಮಾನ, ಅವಳೊಂದಿಗೆ ಸಮುದಾಯದ ವರ್ತನೆ, ಅವಳ ಮೂಕ ರೋಧನೆ, ಸ್ಪೋಟಿಸಿದ ಸಿಟ್ಟು, ಸಮಾಜದಲ್ಲಿನ ಕ್ರೌರ್ಯದ ಸ್ವರೂಪ ಇಂತಹ ಹಲವಾರು ಸಮಸ್ಯೆಗಳನ್ನು ಸಂಕೇತಗಳನ್ನು ಬಳಸಿಕೊಂಡು ಬಹಳ ನಿಖರವಾಗಿ ಹೇಳಲು ಯತ್ನಿಸಲಾಗಿದೆ. ಹೆಣ್ಣು, ಹೆಣ್ತನದ ತಾಕಲಾಟಗಳು,  ರೀತಿ-ನೀತಿಯ ವಿಷಾದಗಳು, ಜೀವವಿರೋಧಿ ಹಾಗೂ ಸಮಾನತೆಗೆ ವಿರೋಧಿಯಾದ ನಂಬಿಕೆಗಳನ್ನು ಇಲ್ಲಿನ ಕವಿತೆಗಳು ಹೊಡೆದುರುಳಿಸುವ ಯತ್ನ ಮಾಡುತ್ತವೆ. ಈ ಕೃತಿಯಲ್ಲಿ ಡಾ. ಪಿ. ಚಂದ್ರಿಕಾ ಅವರ ಬಿಕ್ಕುವ ಜೀವಗಳ ಹಾಗೂ ಸೊಕ್ಕಿನ ಮನುಷ್ಯರ ಇತಿಹಾಸ ಎಂಬ ಮುನ್ನುಡಿ ಹಾಗೂ ಹಿರಿಯ ಕವಿ ಬಿ. ಆರ್. ಲಕ್ಷ್ಮಣರಾವ ಅವರ ಸಮಾನತೆ ಮತ್ತು ಸಾಮರಸ್ಯದ ಧ್ವನಿ ಎಂಬ ವಿಶ್ಮೇಷಣಾತ್ಮಕ ಲೇಖನವೂ ಇದೆ. 

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Awards & Recognitions

Related Books