ಶಂಭುಲಿಂಗ ವಾಲ್ದೊಡ್ಡಿ ಅವರ ಹಾಯಿಕುಗಳ ಸಂಗ್ರಹ- ಹೆಂಗರುಳಿನ ಹಾಯಿಕುಗಳು . ಈ ಹಾಯಿಕುಗಳ ವಿಶೇಷತೆಯೆಂದರೆ ಎಲ್ಲವೂ ಮಹಿಳಾಧಾರಿತವಾಗಿವೆ. ಹೆಂಗರುಳಿನ ತಲ್ಲಣ, ವೇದನೆ, ಸಂಕಟ ಹೀಗೆ ನಾನಾ ಪ್ರಕಾರಗಳ ಭಾವನೆಗಳನ್ನು ವ್ಯಕ್ತಪಡಿಸುವಂತಿವೆ.
ಶಂಭುಲಿಂಗ ವಾಗ್ದೊಡ್ಡಿ ಅವರು ಮೂಲತಃ ಬೀದರ ಜಿಲ್ಲೆಯ ವಾಗ್ದೊಡ್ಡಿ ಯವರು. ಲೇಖಕರು, ಜಾನಪದ ಕಲಾವಿದರು, ಗಾಯಕರು, ಬೀದರಿನ ವಿದ್ಯಾನಗರದ ಸಮತಾ ಪ್ರೌಢ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಹೊಸ ದಿಗಂತದ ಹಾಯಿಕುಗಳು, ಮಹಾತಾಯಿ (ಜೀವನ ಚಿತ್ರ), ಮಮತೆಯ ಮಂದರ (ವಿಮರ್ಶಾ ಲೇಖನಗಳ ಸಂಕಲನ) ಪ್ರಶಸ್ತಿ-ಪುರಸ್ಕಾರಗಳು: ಅವರ ಜಾನಪದ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ತಿನಿಂದ 'ಜಾನಪದ ಲೋಕ ಪ್ರಶಸ್ತಿ' ಹಾಗೂ 2008-2009 ನೇ ಸಾಲಿನ 'ರಾಷ್ಟ್ರೀಯ ಉತ್ತಮ ಶಿಕ್ಷಕ' ಪ್ರಶಸ್ತಿ ಲಭಿಸಿದೆ. ...
READ MORE