ಹೆಜ್ಜೆ ಮೂಡಿದ ಮೇಲೆ

Author : ಸತ್ಯಮಂಗಲ ಮಹಾದೇವ

Pages 48

₹ 35.00




Year of Publication: 2011
Published by: ನಿತ್ಯೋತ್ಸವ ಪ್ರಕಾಶನ
Address: ಸ್ವಾಮಿ ವಿವೇಕನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಳ್ಳಂಬೆಳ್ಳ ಗ್ರಾಮ, ಸಿರಾ ತಾಲ್ಲೂಕು ತುಮಕೂರು ಜಿಲ್ಲೆ
Phone: 9740941126

Synopsys

ಸತ್ಯಮಂಗಲ ಮಹದೇವರ ’ಹೆಜ್ಜೆ ಮೂಡಿದ ಮೇಲೆ’ ಕೃತಿ ಮನುಷ್ಯನ ಬದುಕಿನ ಸ್ಥಿತ್ಯಂತರಗಳ ಪ್ರತೀಕ. ನೋವು ಹತಾಶೆ, ಅಸಹಾಯಕತೆ ಅಲ್ಲದೆ ಬದುಕಿನ ಅನಿವಾರ್ಯತೆ, ಬವಣೆಯ ಕುರಿತಾದ ಕವಿತೆಗಳು ಓದುಗನೊಳಗೆ ತಲ್ಲಣ ಸೃಷ್ಟಿಸದೇ ಇರವು. 

ನೂರು ದನಿಗಳು, ಏನಿಲ್ಲ, ತೀರದ ಯಾನ, ಕನಸುಗಳೆ ಬನ್ನಿ ಯುಗಾದಿ, ಸಂಕ್ರಾಂತಿ ಹೀಗೆ ಒಟ್ಟು 35 ಕವನಗಳಿವೆ.

About the Author

ಸತ್ಯಮಂಗಲ ಮಹಾದೇವ
(12 June 1983)

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ...

READ MORE

Related Books